ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಅಧಿಕಾರಕ್ಕೆ ಬಂದು ಕೇವಲ ಒಂದುವರೆ ವರ್ಷಕ್ಕೇ ಸಂಪೂರ್ಣ ವಿಫಲವಾದ ಮೊದಲ ಸರ್ಕಾರ ಇದು. ಚುನಾವಣೆಗೆ ಮುನ್ನ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ನೀಡುವುದಾಗಿ ನಂಬಿಸಿ ಮೊಣಕೈಗೆ ಬೆಣ್ಣೆ ನೆಕ್ಕಿಸಿ, ಈಗ ಜನರ ಹಿತವನ್ನೇ ಮರೆತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಅಭಿವೃದ್ಧಿಗೆ ಒಂದು ಬಿಡಿಗಾಸೂ ಬಿಡುಗಡೆ ಮಾಡಿಲ್ಲ, ಸರ್ಕಾರಿ ನೌಕರರಿಗೆ ಸಂಬಳವಿಲ್ಲ, ಗ್ರಾಮ ಮಟ್ಟದ ಅಧಿಕಾರಿಗಳಾದ ಪಿಡಿಓ, ವಿ.ಏ ಗಳಿಗೆ ವೇತನ ನೀಡಡಿದ್ದುದಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದು ನಾವೆಲ್ಲರೂ ನೋಡುತ್ತಿದ್ದೇವೆ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ನೀಡುತ್ತಿಲ್ಲ, ಗೃಹ ಲಕ್ಷ್ಮೀ ಯೋಜನೆಯ ಹಣ ಮಹಿಳೆಯರಿಗೆ
ಸಿಗುತ್ತಿಲ್ಲ, ಎಲ್ಲಾ ಗ್ಯಾರಂಟಿ ಯೋಜನೆಗಳು ಮರೀಚಿಕೆಯಾಗಿದೆ. ಸುಭಿಕ್ಷ ಆಡಳಿತ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ, ಆಡಳಿತ ಯಂತ್ರ ಸಂಪೂರ್ಣ ಸ್ಥಗಿತವಾಗಿದೆ. ಇಷ್ಟಕ್ಕೆ ಮುಗಿಯುವುದಿಲ್ಲ ಕಾಂಗ್ರೆಸ್ ದುರಾಡಳಿತ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ, ಪ್ರತಿ
ತಿಂಗಳು ಹಣ ಜಮಾ ಮಾಡುವಂತೆ ತಾಕೀತು ಮಾಡಿರುವ ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಭಂದಪಟ್ಟ ದೇವಸ್ಥಾನಗಳ ಹುಂಡಿಯ ಹಣವನ್ನು ಸಹ ಬಕಾಸುರನಂತೆ ನುಂಗುತ್ತಿದೆ, ಲಕ್ಷಾಂತರ ಜನರ ಪಡಿತರ ಚೀಟಿ ರದ್ದುಗೊಳಿಸಿ, ಬಡ ಜನರ ಒಂದು ಹೊತ್ತಿನ ಊಟಕ್ಕೂ ಕಲ್ಲು ಹಾಕಿದೆ.
ಕೇಂದ್ರ ಸರ್ಕಾರ ನಿರಂತರವಾಗಿ ಅಕ್ಕಿಯನ್ನು ರಾಜ್ಯಕ್ಕೆ ಪೂರೈಸುತ್ತಿದ್ದರೂ, ಆ ಅಕ್ಕಿಯನ್ನು ಸಹ ಜನರಿಗೆ ವಿತರಿಸದೆ ಎರಡು ತಿಂಗಳುಗಳೇ ಕಳೆದಿದೆ, ಹಿಂದೂ ಹಬ್ಬದ ದಿನಗಳಲ್ಲಿ ಜನರು ಊಟದಿಂದ ವಂಚಿತರಾಗುವಂತೆ ಉದ್ದೇಶ ಪೂರ್ವಕವಾಗಿಯೇ ಕಾಂಗ್ರೆಸ್ ಸರ್ಕಾರ ಅಕ್ಕಿಯನ್ನು ವಿತರಿಸುತ್ತಿಲ್ಲವೇ? ಈ ರಾಜ್ಯ ಸರ್ಕಾರಕ್ಕೇ ಜನರು ಹಿಡಿ ಶಾಪ ಹಾಕುತ್ತಿರುವುದು ಸುಳ್ಳಲ್ಲ. ಹುಬ್ಬಳ್ಳಿ ಗಲಭೆಯ ಪ್ರಕರಣವನ್ನು ಹಿಂಪಡೆದು ತಾನೇ ಗಲಭೆಕೋರರು ಲೈಸನ್ಸು ನೀಡುತ್ತಿದೆ. ಇನ್ನೇನು ಬೇಕು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ?