ನವದೆಹಲಿ: ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿ ಬೀಳುವ ಮತಗಳನ್ನು ಶೇ 100ರಷ್ಟು ತಾಳೆ ಮಾಡಬೇಕು ಎಂಬ ಕೋರಿಕೆಯುಳ್ಳ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ. ಸಮತೋಲಿತ ದೃಷ್ಟಿಕೋನವು ಮುಖ್ಯವಾಗಿದ್ದರೂ ವ್ಯವಸ್ಥೆಯನ್ನು ಕುರುಡಾಗಿ ಸಂದೇಹಿಸುವುದು ಸರಿಯಲ್ಲ. ಅದು ಸಂದೇಹವನ್ನು ಹುಟ್ಟು ಹಾಕುವುದು. ಅರ್ಥಪೂರ್ಣ ಟೀಕೆಗಳ ಅಗತ್ಯವಿದೆ. ಪ್ರಜಾಪ್ರಭುತ್ವವು ಎಲ್ಲಾ ಆಧಾರಸ್ತಂಭಗಳ ನಡುವೆ ಸಾಮರಸ್ಯ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವುದು. ನಂಬಿಕೆಯ ಸಂಸ್ಕೃತಿಯನ್ನು ಪೋಷಿಸುವ ಮೂಲಕ ಸಹಯೋಗ ನೀಡಿ ನಾವು ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು ಎಂದು ನ್ಯಾ. ದತ್ತಾ ತೀರ್ಪಿನಲ್ಲಿ ತಿಳಿದಿದ್ದಾರೆ.