Thursday, September 12, 2024
Homeರಾಜಕೀಯಮಾಜಿ ಶಾಸಕರೇ ಸಮುದಾಯ ಭವನ ಅನುದಾನ ತಡೆಹಿಡಿದಿದ್ದಾರೆ: ಪ್ರಿಯದರ್ಶಿನಿ ದೇವಾಡಿಗ

ಮಾಜಿ ಶಾಸಕರೇ ಸಮುದಾಯ ಭವನ ಅನುದಾನ ತಡೆಹಿಡಿದಿದ್ದಾರೆ: ಪ್ರಿಯದರ್ಶಿನಿ ದೇವಾಡಿಗ

ದೇವಾಡಿಗ ಸಮುದಾಯಕ್ಕೆ ಸಂಸದರಿಂದ ಅನ್ಯಾಯವಾಗಿಲ್ಲ

ಬೈಂದೂರು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಹಾಗೂ ಸಂಸದರಾದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಸೋಮವಾರ ಬೈಂದೂರು ಅಂಬಿಕಾ ಇಂಟರ್ನ್ಯಾಷನಲ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು, ಗ್ರಾಮ ಪಂಚಾಯಿತಿಯ ತೀರ ಹಳ್ಳಿ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಮರವಂತೆ, ಕೊಡೇರಿ ಹಾಗೂ ಶಿರೂರು ಅಗದ್ದೆಯಲ್ಲಿ ಬಂದರು ನಿರ್ಮಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆ ಜೊತೆಗೆ ಕ್ಷೇತ್ರದಲ್ಲಿ ಬರುವ ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿಗೆ ವಿಶೇಷ ಅನುದಾನ ಒದಗಿಸಲಾಗಿದೆ.

ದೇವಾಡಿಗರ ಸಮುದಾಯ ಭವನಕ್ಕೆ 1 ಕೋ.ರೂ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಮಾನ್ಯ ಸಂಸದರಾದ ಬಿ.ವೈ.ರಾಘವೇಂದ್ರ ಅವರು ವಿಶೇಷ ಮುತುವರ್ಜಿ ವಹಿಸಿ ಸುಮಾರು 5 ಕೋಟಿ ವೆಚ್ಚದಲ್ಲಿ ಕರ್ನಾಟಕದ ನೀರಾವರಿ ನಿಗಮದ ಮೂಲಕ 15 ಕಾಮಗಾರಿಗಳನ್ನು ಕ್ಷೇತ್ರಕ್ಕೆ ತಂದುಕೊಟ್ಟಿದ್ದಾರೆ. ಅದೆಲ್ಲವೂ ಸಮುದಾಯ ಭವನ ಸಂಬಂಧಿಸಿದ್ದಾಗಿದೆ.

ಭಾನುವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಒಂದು ಪ್ರಶ್ನೆಯನ್ನುತ್ತಿದ್ದರು. ಈ ಕ್ಷೇತ್ರಕ್ಕೆ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಕೊಡುಗೆಯನ್ನು ಮತ್ತು ದೇವಾಡಿಗರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ 15 ವರ್ಷ ಶಾಸಕರಾಗಿದ್ದವರು ಓರ್ವ ಸಂಸದರ ಬಗ್ಗೆ ಮಾತಾಡುವಾಗ ಆಲೋಚನೆ ಮಾಡಬೇಕು. ಏಕವಚನದಲ್ಲಿ ಮಾತಾಡುವುದು ಸರಿಯಲ್ಲ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪಕ್ಷದ ಮುಖಂಡರಾದ ಬಿ ರಾಜಶೇಖರ್, ಕೃಷ್ಣ ದೇವಾಡಿಗ, ಅಶೋಕ್ ದೇವಾಡಿಗ, ಚಂದ್ರ ದೇವಾಡಿಗ ಪತ್ರಿಕಾ ಗೋಷ್ಠಿ ಉಪಸ್ಥಿತರಿದ್ದರು.

ಬೈಂದೂರು ಬಿಜೆಪಿ ಮಂಡಲ ಖಜಾಂಚಿ ಶ್ರೀಗಣೇಶ ಗಾಣಿಗ ಉಪ್ಪುಂದ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular