Tuesday, June 18, 2024
Homeಮೂಡುಬಿದಿರೆಎಕ್ಸಲೆ೦ಟ್ ಮೂಡುಬಿದಿರೆ : ಜೆ.ಇ.ಇ. ಅಡ್ವಾನ್ಸ್ ರಾಷ್ಟ್ರಮಟ್ಟದ ಸಾಧನೆ

ಎಕ್ಸಲೆ೦ಟ್ ಮೂಡುಬಿದಿರೆ : ಜೆ.ಇ.ಇ. ಅಡ್ವಾನ್ಸ್ ರಾಷ್ಟ್ರಮಟ್ಟದ ಸಾಧನೆ

ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕಷ್ಟ ಸಾಧನೆಗೈದಿದ್ದಾರೆ. ಡಾ ಪ್ರಶಾಂತ್ ಹೆಗ್ಡೆ ಮತ್ತು ಕೋಕಿಲಾ ಹೆಗ್ಡೆ ಅವರ ಮಗ ನಿಶಾಂತ್ ಹೆಗ್ಡೆ ರಾಷ್ಟ್ರ ಮಟ್ಟದಲ್ಲಿ 4349ನೇ ಸ್ಥಾನ ( ಜಿ.ಎಂ.), ಚಿರಾಗ್ ಕಂಚಿರಾಯ್ 573 ನೇ ಸ್ಥಾನ (ಸಿ), ಸಾನ್ವಿ ಎಸ್ ಟಿ
1404 ನೇ ಸ್ಥಾನ (ಸಿ), ಸಂಜಯ್ ಬಿರಾದರ್ 2200 ನೇ ಸ್ಥಾನ (ಸಿ), ಸಚಿನ್ 3023ನೇ ಸ್ಥಾನ (ಸಿ), ರೋಹನ್ ಎಸ್ 4263ನೇ ಸ್ಥಾನ (ಸಿ) ಪಡೆದು ಉತ್ತಮ ಸ್ಥಾನ ಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular