ಉಳ್ಳಾಲ: ಈ ಬಾರಿಯ ಕಂಬಳೋತ್ಸವಕ್ಕೆ ಮುಖ್ಯಮಂತ್ರಿ ಬರಬೇಕೆನ್ನುವ ಬೇಡಿಕೆ ಹಿನ್ನೆಲೆಯಲ್ಲಿ ಜ.26ಕ್ಕೆ ನಡೆಯಬೇಕಿದ್ದ ಸಾವಿರ ಕೋಟಿ ಅನುದಾನದ ಕಾರ್ಯಕ್ರಮ ಮುಂದೂಡಿ ಕಂಬಳಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯಿಂದ ಭರವಸೆಯೂ ಸಿಕ್ಕಿದೆ ಎಂದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ ಬೋಳ ಸರ್ಕಾರಿ ಕಂಬಳಕರೆಯಲ್ಲಿ ಜ.11ರಂದು ನಡೆಯಲಿರುವ ತೃತೀಯ ವರ್ಷದ ಲವ-ಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ’ದ ಆಮಂತ್ರಣ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಮಾತನಾಡಿ, ಜಿಲ್ಲಾಮಟ್ಟದಲ್ಲಿ ನರಿಂಗಾನ ಕಂಬಳೋತ್ಸವ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆ ವಿಚಾರ ಎಂದರು.
ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ, ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮೋರ್ಲಗುತ್ತು, ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮ್ಯಾಕ್ಸಿಂ ಡಿಸೋಜ, ಕರುಣಾಕರ ಶೆಟ್ಟಿ ಮೋರ್ಲ, ಕಾರ್ಯದರ್ಶಿ ಪ್ರವೀಣ್ ಆಳ್ವ ಮಯ್ಯಲ, ಮಹಾಮ್ಮಾಯಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರೇಮಾನಂದ ರೈ ನೆತ್ತಿಲಕೋಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನರಿಂಗಾನ ಗ್ರಾಪಂ ಅಧ್ಯಕ್ಷ ನವಾಜ್ ಕಲ್ಲರಕೋಡಿ ವಂದಿಸಿದರು. ಪತ್ರಕರ್ತ ಸತೀಶ್ ಪುಂಡಿಕೈ ನಿರೂಪಿಸಿದರು. ನರಿಂಗಾನ ಕಂಬಳೋತ್ಸವದ ಆಮಂತ್ರಣ ಸ್ಪೀಕರ್ ಯು.ಟಿ.ಖಾದರ್ ಬಿಡುಗಡೆ ಗೊಳಿಸಿದರು. ಪ್ರಶಾಂತ್ ಕಾಜವ, ಗಿರೀಶ್ ಆಳ್ವ ಮೋರ್ಲ ಇತರರು ಉಪಸ್ಥಿತರಿದ್ದರು.