Sunday, July 21, 2024
Homeಅಪರಾಧರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರು ಆರೋಪಿಗಳಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೃತದೇಹ ವಿಲೇವಾರಿಗೆ 30 ಲಕ್ಷ ರೂ. ಪಡೆದುಕೊಂಡಿದ್ದ ಮೂವರ ಗ್ಯಾಂಗ್‌, ರಾತ್ರಿಯಿಡಿ ದರ್ಶನ್‌ ಜೊತೆಗೆ ವಾಟ್ಸಪ್‌ ಕಾಲ್‌ ನಲ್ಲಿ ಸಂಪರ್ಕದಲ್ಲಿದ್ದರು.

ಬಳಿಕ ಶವ ಪತ್ತೆಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಪೊಲೀಸರಿಗೆ ಶರಣಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ನಾಲ್ವರು ಆರೋಪಿಗಳು ಶರಣಾಗುವಂತೆ ದರ್ಶನ್‌ ಸೂಚನೆ ನೀಡಿದ್ದರು ಎನ್ನಲಾಗಿದೆ. ಬಳಿಕ ಅನುಮಾನಗೊಂಡ ಪೊಲೀಸರು ತಮ್ಮದೇ ಸ್ಟೈಲ್‌ ನಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರನದ A-1 ಆರೋಪಿಯಾಗಿರುವ ಪವಿತ್ರಾಗೌಡರನ್ನು ಇದೀಗ ಮಹಿಳಾ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಬರಲಾಗಿದ್ದು, ಸದ್ಯ ಪವಿತ್ರ ಅವರ ಮೊಬೈಲ್‌ ವಶಕ್ಕೆ ಪಡೆಯಾಗಿದ್ದು, ರೇಣುಕಾಸ್ವಾಮಿ ಹಾಗೂ ಪವಿತ್ರಾಗೌಡ ನಡುವಿನ ಸಂಭಾಷಣೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಮತ್ತು ಸಹಚರರು ಪೊಲೀಸ್‌ ಕಸ್ಟಡಿಯಲ್ಲಿ ರಾತ್ರಿ ಕಳೆದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶದ ಬೆನ್ನಲ್ಲೇ ವಶಕ್ಕೆ ಪಡೆದಿರುವ ಪೊಲೀಸರು ದರ್ಶನ್‌ ಮತ್ತು ಸಹಚರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಕಸ್ಟಡಿಗೆ ಹಾಕಿದೆ.

ರಾತ್ರಿ ನಟ ದರ್ಶನ್‌ ಮತ್ತು ಸಹಚರರಿಗೆ ಬೆಡ್‌ ಶೀಟ್‌, ಕಾರ್ಪೇಟ್‌ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ತಲೆನೋವು, ಮೈ-ಕೈ ನೋವಿಗೆ ಡೋಲೋ -೬೫೦ ಮಾತ್ರೆ ತರಿಸಿದ್ದರು. ಬಂಧನದಿಂದಾಗಿ ನಟ ದರ್ಶನ್‌ ಚಿಂತಾಕ್ರಾಂತರಾಗಿದ್ದು, ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದರು ಎನ್ನಲಾಗಿದೆ. ಅನ್ನಪೂರ್ಣೇ‍ಶ್ವರಿ ಪೊಲೀಸ್‌ ಠಾಣೆಯ ಮುಂದೆ ಕೆಎಸ್‌ ಆರ್‌ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular