ದಾವಣಗೆರೆ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಆಶ್ರಯದಲ್ಲಿ ೭೦ನೇ ವರ್ಷದ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ “ಸರಸ್ವತಿ ಸಾಧಕ ಸಿರಿ” ರಾಷ್ಟç ಪ್ರಶಸ್ತಿಗೆ ಹಲವು ವಿವಿಧ ಕ್ಷೇತ್ರಗಳ ಸಾಧಕರ ಒತ್ತಾಯದ ಮೇರೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಮಾಜ ಸೇವೆ, ಯೋಗ, ರಂಗಭೂಮಿ, ಜಾನಪದ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಸ್ಥೆಯ ಮುತ್ತೈ ದೆಯರು ಸ್ವಾಗತಿಸಿ, ಕನ್ನಡ ತಿಲಕವಿಟ್ಟು, ಕನ್ನಡ ಕಂಕಣಕಟ್ಟಿ, ಕನ್ನಡಾರತಿ ಬೆಳಗಿ, ಪುಷ್ಪವೃಷ್ಟಿಯೊಂದಿಗೆ ಗೌರವಿಸಿ ನಂತರ ಭವ್ಯ ದಿವ್ಯ ವೇದಿಕೆಯಲ್ಲಿ ಪ್ರತ್ಯೇಕವಾದ ಸಿಂಹಾಸನದ ಮೇಲೆ ಕೂರಿಸಿ, ಕನ್ನಡ ಪೇಟಾ, ಹಾರ, ಶಾಲು, ಚಿನ್ನದ ಲೇಪನದ ಪದಕ ಹಾಕಿ, ಸಾಧಕರ ಭಾವಚಿತ್ರವಿರುವ ಸನ್ಮಾನಪತ್ರ, ಶಾರದ ಮಾತೆಯ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ನಾಗೇಶ ಸಂಜೀವ ಕಿಣಿ ಪ್ರಕಟಿಸಿದ್ದಾರೆ.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದೊಂದಿಗೆ ನಡೆಯಲಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ 15-01-2025 ಹೆಚ್ಚಿನ ಮಾಹಿತಿಗೆ ವಿವಿಧ ಕ್ಷೇತ್ರಗಳ ಸಾಧಕರು 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ರಾಘವೆಂದ್ರ ಶೆಣೈ ವಿನಂತಿಸಿದ್ದಾರೆ.