ದಾವಣಗೆರೆ-ಸೆಪ್ಟೆಂಬರ್,
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ, ಕಿರಿಯ ಸಾಧಕರಿಗೆ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿಯನ್ನು ವೈಭವಪೂರ್ಣವಾಗಿ ವಿಜೃಂಭಣೆಯಿಂದ ಕನ್ನಡ ಪೇಟದೊಂದಿಗೆ ಗೌರವಿಸಿ ಸನ್ಮಾನಿಸಲಾಗುವುದು ಹಾಗೂ ಸಾಧಕರು ತಮ್ಮ ಸಾಧನೆಯ ಪರಿಚಯವನ್ನು ಸಲ್ಲಿಸುವ ದಿನಾಂಕ 25-09-2024ರವರೆಗೆ ವಿಸ್ತರಿಸಲಾಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ದಾವಣಗೆರೆಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ದಿನಾಂಕ 01-12- 2024 ರಂದು ಭಾನುವಾರ ನಡೆಯಲಿರುವ ಈ ದಿವ್ಯ ಭವ್ಯ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಕಲಾಕುಂಚದ ಮುತ್ತೈದೆಯರು ಪುಷ್ಪವೃಷ್ಠಿಯೊಂದಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣಕಟ್ಟಿ, ಕನ್ನಡಾರತಿ ಬೆಳಗಿ ಗೌರವಿಸಿ ಸಾಧಕರ ಭಾವಚಿತ್ರವಿರುವ ಸನ್ಮಾನಪತ್ರ ಪ್ರೇಂ ಮಾಡಿಸಿ ವಿತರಿಸಿ ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.