ಮಲಬಾರ್ ಗ್ರೂಪ್ ‘ಹಂಗರ್-ಫ್ರೀ ವರ್ಲ್ಡ್ ಪ್ರೋಗ್ರಾಮ್’ ವಿಸ್ತರಣೆ; ಪ್ರತಿದಿನ 51,000 ಪೌಷ್ಠಿಕ ಆಹಾರದ ಪಾಕೆಟ್‌ಗಳನ್ನು ವಿತರಿಸಲು ಯೋಜನೆ

0
179

ಮಲಬಾರ್ ಗ್ರೂಪ್ ‘ಹಂಗರ್-ಫ್ರೀ ವರ್ಲ್ಡ್’ ಅನ್‌ ಗೋಯಿಂಗ್‌ ಸಿಎಸ್‌ಆರ್ ಪ್ರೋಗ್ರಾಮ್ ಅಡಿಯಲ್ಲಿ ನಿರತವಾಗಿ ಪೌಷ್ಠಿಕ ಆಹಾರವನ್ನು ವಿತರಿಸಲು ಮತ್ತು ಮತ್ತಷ್ಟು ಜನರಿಗೆ ಮತ್ತು ನಗರಗಳಿಗೆ ವಿಸ್ತರಿಸಲು ಯೋಜಿಸಿದೆ. ಪ್ರಸ್ತುತ, ಈ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ದಿನಕ್ಕೆ 31,000 ಆಹಾರದ ಪಾಕೆಟ್‌ಗಳನ್ನು ವಿತರಿಸಲಾಗುತ್ತಿದೆ, ಜಾಗತಿಕ‌ ಯೂಎನ್‌ಒ (UNO) ಸುಸ್ಥಿರ ಅಭಿವೃದ್ಧಿ ಗುರಿ 2 – ಶೂನ್ಯ ಹಸಿವು (UNO Sustianable Development Goal 2 – Zero Hunger) ಸಪೋರ್ಟ್ ಮಾಡಲು ಪ್ರಾರಂಭಿಸಲಾಯಿತು. ವಿಸ್ತರಣೆಯ ಭಾಗವಾಗಿ, ಈಗ ದಿನಕ್ಕೆ 51,000 ಪೌಷ್ಠಿಕ ಆಹಾರದ ಪಾಕೆಟ್‌ಗಳನ್ನು ವಿತರಿಸಲಾಗುತ್ತದೆ.

“ಕರ್ನಾಟಕದಲ್ಲಿ ನಾವು ನಮ್ಮ CSR ಚಟುವಟಿಕೆಗಳ ಮೂಲಕ ಜನರಿಗೆ ತಲುಪುವಲ್ಲಿ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯ ಮಾಡಿದ್ದೇವೆ. 2023ರಲ್ಲಿ ಕರ್ನಾಟಕದಲ್ಲಿ ಹಂಗರ್ ಫ್ರೀ ವರ್ಲ್ಡ್ ಯೋಜನೆ ಆರಂಭಿಸಲಾಯಿತು, ಮತ್ತು ಈಗ 7,167 ಜನರ ದಿನಸಿ ಊಟಕ್ಕೆ ಪ್ರಮಾಣವನ್ನು ಹೆಚ್ಚಿಸಿ, ವಾರ್ಷಿಕವಾಗಿ 26,15,955 ಆಹಾರದ ಪಾಕೆಟ್‌ಗಳನ್ನು ವಿತರಿಸಲಾಗುತ್ತದೆ,” ಎಂದು ಮಲಬಾರ್ ಗ್ರೂಪ್ ತಿಳಿಸಿದೆ.

ಮಲಬಾರ್ ಚಾರಿಟೇಬಲ್ ಟ್ರಸ್ಟ್ ದಿನಕ್ಕೆ 51,000 ಜನರ ಆಹಾರ ಪಾಕೆಟ್‌ಗಳನ್ನು ಮತ್ತು ವಾರ್ಷಿಕವಾಗಿ 18.6 ಮಿಲಿಯನ್ ಆಹಾರದ ಪಾಕೆಟ್‌ಗಳನ್ನು 71 ಸ್ಥಳಗಳಲ್ಲಿ ಜಾಗತಿಕವಾಗಿ ವಿತರಿಸುತ್ತದೆ. ಪ್ರಸ್ತುತ, ಈ ಯೋಜನೆ 16 ರಾಜ್ಯಗಳಲ್ಲಿ 37 ನಗರಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ, ಜೊತೆಗೆ ಕೆಲ ಗಲ್ಫ್ ದೇಶಗಳಲ್ಲಿ ಕೇಂದ್ರಗಳಲ್ಲಿದೆ. ವಿಸ್ತರಣೆಯ ಭಾಗವಾಗಿ, ಈಗ 16 ರಾಜ್ಯಗಳಲ್ಲಿ 70 ನಗರಗಳನ್ನು ಒಳಗೊಂಡಿದೆ.

ಮಲಬಾರ್ ಗುಂಪು ಆಫ್ರಿಕಾ ರಾಷ್ಟ್ರ ಜಾಂಬಿಯಲ್ಲಿ ಶಾಲಾ ಮಕ್ಕಳಿಗಾಗಿ ಇದೇ ಯೋಜನೆಯನ್ನು ಪ್ರಾರಂಭಿಸಲು ಯೋಜಿಸಿದೆ. “ನಮ್ಮ ಸುತ್ತಲೂ ಇಂದಿಗೂ ಒಂದು ಊಟವನ್ನು ಪಡೆಯಲು ಹೋರಾಡುತ್ತಿರುವ ಜನರಿದ್ದಾರೆ. ಈ ಯೋಜನೆಯನ್ನು ನಾವು ಸರ್ಕಾರಗಳು ಮತ್ತು ಸಂಸ್ಥೆಗಳ ಸಹಾಯಕ್ಕೆ ನಿಡಲು ಪ್ರಾರಂಭಿಸಿದ್ದೇವೆ,” ಎಂದು ಎಂಪಿ ಅಹಮ್ಮದ್ ಹೇಳಿದರು.

ಹಂಗರ್ ಫ್ರೀ ವರ್ಲ್ಡ್ ಪ್ರೋಗ್ರಾಮ್ ಹೈಲಿ ರೆಕೊಗ್ನಾಯಿಜ್ಡ್‌ ಸೋಶಿಯಲ್‌ ವೆಲ್ಫೆರ್‌ ಎನ್ ಜಿ ಒ (highly recognized social welfare NGO) ‘ತಾನಲ್ – ದಯಾ ರಿಹ್ಯಾಬಿಲಿಟೇಶನ್ ಟ್ರಸ್ಟ್’ ಸಹಯೋಗದೊಂದಿಗೆ ಕಾರ್ಯಗತಗೊಳ್ಳುತ್ತಿದೆ. ಪೌಷ್ಠಿಕ ಆಹಾರವನ್ನು ತಯಾರು ಮಾಡಲು ವಿವಿಧ ಸ್ಥಳಗಳಲ್ಲಿ ಆಧುನಿಕ ಅಡಿಗೆಮನೆಯನ್ನು ಸ್ಥಾಪಿಸಲಾಗಿದೆ. ಮಲಬಾರ್ ಗ್ರೂಪ್ ಮತ್ತು ತಾನಲ್ ಸ್ವಯಂಸೇವಕರು ಬಡವರಿಗೆ ಆಹಾರದ ಪಾಕೆಟ್‌ಗಳನ್ನು ಅವರ ಮನೆಗಳಿಗೆ ತಲುಪಿಸುತ್ತಿದ್ದಾರೆ.

ಈ ಯೋಜನೆಯ ಭಾಗವಾಗಿ, ಬಡ ಮತ್ತು ಅನಾಥ ವೃದ್ಧ ಮಹಿಳೆಯರನ್ನು ಗುರುತಿಸಲು ಮತ್ತು ಅವರಿಗೆ ಉಚಿತ ಆಹಾರ, ವಸತಿ ಮತ್ತು ಇತರ ಆರೋಗ್ಯ ಸೇವೆಗಳನ್ನು ಒದಗಿಸಲು ‘ಗ್ರ್ಯಾಂಡ್‌ಮಾ ಹೋಮ್’ ಪ್ರಾಜೆಕ್ಟ್‌ ಪ್ರಾರಂಭಿಸಲಾಗಿದೆ. ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಎರಡು ‘ಗ್ರ್ಯಾಂಡ್‌ಮಾ ಹೋಮ್’ಗಳನ್ನು ಸ್ಥಾಪಿಸಲಾಗಿದೆ. ಚೆನ್ನೈ, ಕೊಲ್ಕತ್ತಾ, ದೆಹಲಿ, ಮುಂಬೈ ಮತ್ತು ಕೇರಳದ ಕೆಲವು ಆಯ್ಕೆಯ ಪಟ್ಟಣಗಳಲ್ಲಿ ಈ ರೀತಿಯ ಮನೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.

ಮಲಬಾರ್ ಗ್ರೂಪ್ ವಿದ್ಯಾಭ್ಯಾಸ ಸಹಾಯ, ವೈದ್ಯಕೀಯ ನೆರವು, ಮತ್ತು ಮನೆ ನಿರ್ಮಾಣಕ್ಕೆ ಸಹಾಯ ಸೇರಿದಂತೆ ಹಲವಾರು ಸಮಾಜ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಮಲಬಾರ್ ಗ್ರೂಪ್ ತನ್ನ ವರ್ಟಿಕಲ್ಸ್, ಸೇರಿದಂತೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಲಾಭದ ಐದು ಶೇಕಡಾವನ್ನು ಸಿಎಸ್‌ಆರ್ ಫಂಡ್‌ಗೆ ಮೀಸಲಿಟ್ಟಿದೆ.

ಮಂಗಳೂರು ಹಂಗರ್ ಫ್ರೀ ವರ್ಲ್ಡ್ ಡೇ ಅತಿಥಿಗಳು:
ಡಾ. ಹೇಮಲತಾ – (ಅಡಿಕೆ ಮತ್ತು ಪೂರೈಕೆ ಇಲಾಖೆ ಉಪ ನಿರ್ದೇಶಕಿ ಮಂಗಳೂರು)
ಚಿತ್ತರಂಜನ್ ದಾಸ್ – (ಮಂಗಳೂರು ನಗರ ನಿಗಮ ನಗರ ಆಯುಕ್ತ ವ್ಯವಸ್ಥಾಪಕ)
ಕೃಷ್ಣ ಕುಮಾರ್ ಪುಂಜಾ – (ಸೇವಂಜಳ್ಳಿ ಚಾರಿಟೆಬಲ್ ಟ್ರಸ್ಟ್ ಬಂಟ್ವಾಳ ವ್ಯವಸ್ಥಾಪಕ ಟ್ರಸ್ಟಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ)
ಮೊಯ್ದೀನ್ – (ಸೌದಿ ಅರೇಬಿಯಾದಲ್ಲಿ ಸಹಾಯ ಮಾಡುತ್ತಿರುವ ಮತ್ತು KKMA ಕನ್ನಡ ಅಧ್ಯಾಯದ ಸ್ಥಾಪಕ ಅಧ್ಯಕ್ಷ)
ಮತ್ತು ನಿರ್ವಹಣಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here