Monday, January 20, 2025
HomeUncategorizedಸಹಕಾರ ಡಿಪ್ಲೊಮಾ ಕೋರ್ಸ್' ಪ್ರವೇಶಕ್ಕಾಗಿ ಅವಧಿ ವಿಸ್ತರಣೆ

ಸಹಕಾರ ಡಿಪ್ಲೊಮಾ ಕೋರ್ಸ್’ ಪ್ರವೇಶಕ್ಕಾಗಿ ಅವಧಿ ವಿಸ್ತರಣೆ


೨೦೨೫ ಜನವರಿಯಿಂದ ಪ್ರಾರಂಭವಾಗುವ ೬ ತಿಂಗಳ ಅವಧಿಯ ”ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ಗೆ” ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಾಮಾನ್ಯ ಹಾಗೂ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿವಿಧ ಸಹಕಾರ ಸಂಘ/ಬ್ಯಾAಕ್‌ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ಜ ೧೫ ರವರೆಗೆ ವಿಸ್ತರಿಸಲಾಗಿದೆ. ಪ್ರವೇಶ ಪಡೆದ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ.೬೦೦/- ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ.೫೦೦/- ಶಿಷ್ಯ ವೇತನ ನೀಡಲಾಗುವುದು.
ಸಹಕಾರ ಡಿಪ್ಲೊಮಾ ಕೋರ್ಸ್ ಪಡೆದ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ/ಸAಸ್ಥೆಗಳು ಮತ್ತು ಬ್ಯಾಂಕ್‌ಗಳ ಉದ್ಯೋಗ ಅವಕಾಶಗಳಲ್ಲಿನ ನೇಮಕಾತಿಗೆ ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಆದ್ಯತೆ ಕಲ್ಪಿಸಲಾಗಿದೆ.
ಅಲ್ಲದೆ ಈ ಪಠ್ಯಕ್ರಮವು ಕೆ.ಎ.ಎಸ್ ಪರೀಕ್ಷೆಯ ‘ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ’ ವಿಷಯ ಮತ್ತು ಸಹಕಾರ ಇಲಾಖೆಯ ಕೋ-ಆಪರೇಟಿವ್ ಇನ್‌ಸ್ಪೆಕ್ಟರ್ ಹುದ್ದೆ ಹಾಗೂ ಎಲ್ಲಾ ಸಹಕಾರ ಸಂಘ/ಸAಸ್ಥೆಗಳ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿದೆ. ಸಹಕಾರ ಸಂಘ/ಸAಸ್ಥೆಗಳಲ್ಲಿನ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೂರ ಶಿಕ್ಷಣ ಕೊರ್ಸ್ಗೆ ಪ್ರವೇಶ ನೀಡಲಾಗುವುದು ಹೆಚ್ಚಿನ ಮಾಹಿತಿಗೆ ೦೮೨೫೮-೨೩೬೫೬೧, ೯೪೪೯೦ ೭೫೭೪೬, ೮೯೭೧೩ ೬೧೩೯೬ ಸಂಪರ್ಕಿಸಬೇಕಾಗಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular