Sunday, July 14, 2024
Homeಮೂಡುಬಿದಿರೆಪಾಲಡ್ಕ ಪೂಪಾಡಿಕಲ್ಲು-ಬಿ.ಟಿರೋಡ್ ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬ

ಪಾಲಡ್ಕ ಪೂಪಾಡಿಕಲ್ಲು-ಬಿ.ಟಿರೋಡ್ ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬ

ಮೂಡುಬಿದಿರೆ: ಪಾಲಡ್ಕದ ಪೂಪಾಡಿಕಲ್ಲು-ಬಿ.ಟಿರೋಡ್ ಪ್ರದೇಶದಲ್ಲಿ ಗಾಳಿಮಳೆಯಿಂದಾಗಿ ಎರಡು ವಿದ್ಯುತ್ ಕಂಬಗಳು ರಸ್ತೆಗುರುಳಿ ಬಿದ್ದ ಘಟನೆ ಗುರುವಾರ ಅಪರಾಹ್ನ 1.30ರ ಸುಮಾರಿಗೆ ಸಂಭವಿಸಿದೆ. ನೂರು ಮೀಟರ್ ದೂರದಲ್ಲಿ ಮರವೊಂದು ರಸ್ತೆಗಡ್ಡ ಉರುಳಿ ಬಿದ್ದು ವಾಹನ ಸಂಚಾರ ಮಧ್ಯಾಹ್ನದಿಂದ ಸಂಜೆಯವರೆಗೂ ಆತಂಕಿತವಾಗಿದೆ. ಮೂಡುಬಿದಿರೆ -ಕಡಂದಲೆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಪಾಲಡ್ಕ ಚರ್ಚ್ – ಕೊಡಮಣಿತ್ತಾಯ ದೈವಸ್ಥಾನ-ಬಿಟಿ ರೋಡ್ ಮೂಲಕ ಹಾದು ಪಲ್ಕೆಯಾಗಿ ಕಡಂದಲೆ ಮಾರ್ಗದಲ್ಲಿ ಸಂಚರಿಸಬೇಕಾಯಿತು. ಮರ ಧರೆಗುರುಳಲು ಕೆಪಿಟಿಸಿಎಲ್‌ನವರು ಪೂಪಾಡಿಕಲ್ಲು ಪರಿಸರದಲ್ಲಿ ನಡೆಸುತ್ತಿರುವ ಕಾಮಗಾರಿ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಮಾರ್ಗ ತೆರವು ಮಾಡುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಪಾಲಡ್ಕ ಪಿಡಿಓ ರಕ್ಷಿತಾ ಡಿ., ಪೊಲೀಸ್, ಮೆಸ್ಕಾಂ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪರಿಸರದಲ್ಲಿ ವಿದ್ಯುತ್ ಪೂರೈಕೆ ಆತಂಕಿತವಾಗಿದೆ. ಸುಮಾರು 5 ಗಂಟೆಗಳ ಕಾಲ ರಸ್ತೆ ತಡೆಯಾಗಿದೆ.

RELATED ARTICLES
- Advertisment -
Google search engine

Most Popular