Friday, March 21, 2025
Homeಮುಲ್ಕಿತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿ

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿ

ಪಕ್ಷಿಕೆರೆ : ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಬಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ, ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದಾರೆ, ಇತ್ತೀಚೆಗೆ ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು ಇದಕ್ಕೆ ವಿಶಾಲ್ ಒಪ್ಪಿದ್ದಾರೆ.

ನಂತರ ಮಾದ್ಯಮದೊಂದಿಗೆ ಮಾತನಾಡಿದ ವಿಶಾಲ್ ಕಾಂತಾರ ನಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ ಇದೀಗ ಪ್ರಥಮ ಬಾರಿಗೆ ತುಳುನಾಡಿನ ನೇಮೋತ್ಸವವನ್ನು ನೋಡುತ್ತಿದ್ದೇನೆ ತುಂಭಾ ಖುಷಿ ನೀಡಿದೆ, ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಬೇಟಿ ನೀಡಿದ್ದೇನೆ, ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳು ನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತಿದೆ ಎಂದರು.

ಹರಿಪಾದೆ ಜಾರಂದಾಯ ಅತ್ಯಂತ ಕಾರಣಿಕದ ದೈವವಾಗಿದ್ದು ನಂಬಿದವರಿಗೆ ಇಂಬು ನೀಡುವ ದೈವವಾಗಿದೆ ಇಲ್ಲಿನ ನೆಮೋತ್ಸವ ಸಂದರ್ಭ ಜಾರಂದಾಯನ ಪಲ್ಲಕ್ಕಿಗೆ ಅವೇಶ ಬರುತ್ತದೆ, ಸುಮಾರು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನಿಸಿದರು ನಿಯಂತ್ರಣಕ್ಕೆ ಸಿಗುವುದಿಲ್ಲ ಇಂತಹ ಕಾರಣಿಕ ಹೊಂದಿರು ಶ್ರೀ ಕ್ಷೇತ್ರದ ಬಗ್ಗೆ ತಿಳಿದೇ ವಿಶಾಲ್ ಭೇಟಿ ನೀಡಿರುವ ಸಾದ್ಯತೆ ಇದೆ, ಅಲ್ಲದೆ ಈ ದೈವಸ್ಥಾನದಲ್ಲಿ ತುಲಾಬಾರ ಸೇವೆ ಪ್ರಮುಖ್ಯತೆ ಪಡೆದಿದ್ದು ಭಕ್ತರು ಸಮಸ್ಯೆ ನಿವಾರಣೆಗೆ ತುಲಾಬಾರ ಸೇವೆ ನೀಡುತ್ತಿದ್ದು ನಟ ವಿಶಾಲ್ ಕೂಡ ಆರೋಗ್ಯ ಸುದಾರಿಸಿದ ನಂತರ ತುಲಾಬಾರ ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ.

RELATED ARTICLES
- Advertisment -
Google search engine

Most Popular