ಜನಪ್ರಿಯ ಒಡಿಯಾ ಗಾಯಕಿ ರುಕ್ಸಾನಾ ಬಾನೋ ನಿಧನರಾಗಿದ್ದಾರೆ ಎಂದು ಭುವನೇಶ್ವರದ AIIMS ಆಸ್ಪತ್ರೆ ತಿಳಿಸಿದೆ. 27 ವರ್ಷದ ಗಾಯಕಿ ಸ್ಕ್ರಬ್ ಟೈಫಸ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಸದೆ ಆಕೆ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಸಾವಿನ ಹಿಂದೆ ಅವರ ಕುಟುಂಬಸ್ಥರು ಸಂದೇಹ ವ್ಯಕ್ತಪಡಿಸಿದ್ದಾರೆ.
ಪ್ರತಿಸ್ಪರ್ಧಿಗಳು ರುಕ್ಸಾನೊ ಬಾನೊಗೆ ವಿಷ ಉಣಿಸಿದ್ದಾರೆ ಎಂದು ಆಕೆಯ ಸಹೋದರಿ ಹಾಗೂ ತಾಯಿ ಆರೋಪಿಸಿದ್ದಾರೆ. ಆದರೆ ಅವರು ಆರೋಪಿತ ಕಲಾವಿದರ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಹಿಂದೆಯೂ ಕೂಡ ಇಂತಹ ಬೆದರಿಕೆಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ.
ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಕಳೆದ 15 ದಿನಗಳ ಹಿಂದೆ ರುಕ್ಸಾನೊ ಬಾನೊ ಶೂಟಿಂಗ್ ಹೋಗಿದ್ದರು. ಅಲ್ಲಿ ಜ್ಯೂಸ್ ನೀಡಲಾಗಿತ್ತು, ಅದನ್ನು ಕುಡಿದ ಬೆನ್ನಲ್ಲೇ ಅವರು ಕುಸಿದು ಬಿದ್ದಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ಆಗಸ್ಟ್ 27ರಂದು ಭವಾನಿಪಟ್ನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.