Thursday, July 25, 2024
Homeನಿಧನತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ವಿಧಿವಶ

ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ವಿಧಿವಶ

ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ಅವರು 69ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೇ 1ರಂದು ಉಮಾ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿಗೆ ಉಮಾ ಧ್ವನಿ ನೀಡಿದ್ದರು. ಇನ್ನೂ ಅವರ ಸಾವಿನ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಶಾಸ್ತ್ರಿಯ ಸಂಗೀತ ಕಲಿತು ಗಾಯನದಲ್ಲಿ ಹೆಸರು ಮಾಡಿರುವ ಉಮಾ 35 ವರ್ಷಗಳಲ್ಲಿ 6000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. 1977ರಲ್ಲಿ ಹಿಂದಿ ಸಿನಿಮಾದಲ್ಲಿ ಗಾಯನಕ್ಕೆ ಅವಕಾಶ ಸಿಕ್ಕಿದರೂ ಕೂಡ ತಮಿಳು ಚಿತ್ರರಂಗ ಅವರ ಕೆರಿಯರ್‌ಗೆ ಬ್ರೇಕ್ ಕೊಟ್ಟಿದೆ.

ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿಗೆ ಉಮಾ ಧ್ವನಿ ನೀಡಿದ್ದರು. ಶಾಸ್ತ್ರಿಯ ಸಂಗೀತ ಕಲಿತು ಗಾಯನದಲ್ಲಿ ಹೆಸರು ಮಾಡಿರುವ ಉಮಾ 35 ವರ್ಷಗಳಲ್ಲಿ 6000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಇಳಯರಾಜ ಸಂಗೀತದಲ್ಲಿ ಉಮಾ ರಮಣನ್ ಸಾಕಷ್ಟು ಹಿಟ್ ಸಾಂಗ್‌ಗಳನ್ನು ನೀಡಿದ್ದಾರೆ. ಸದ್ಯ ಗಾಯಕಿಯ ನಿಧನಕ್ಕೆ ಆಪ್ತರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular