Sunday, July 21, 2024
Homeನಿಧನಖ್ಯಾತ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ಖ್ಯಾತ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಹೃದಯಾಘಾತದಿಂದ ದ್ವಾರಕೀಶ್ ಸಾವನ್ನಪ್ಪಿದರೆಂದು ವರದಿಗಳಾಗಿವೆ. 1963ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್ ಹಲವು ಸೂಪರ್ ಹಿಟ್ ಚತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ಚಿತ್ರಗಳ ನಿರ್ಮಾಪಕರಾಗಿ ಬಂಡವಾಳವನ್ನೂ ಹೂಡಿದ್ದರು. 81 ವಯಸ್ಸಾಗಿದ್ದ ದ್ವಾರಕೀಶ್ ಎಲೆಕ್ಟ್ರಾನ್ ಸಿಟಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅಲ್ಲೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕನ್ನಡದ ಸುಪ್ರಸಿದ್ಧ ನಟರುಗಳಾದ ಡಾ ರಾಜ್ ಕುಮಾರ್, ವಿಷ್ಣುವರ್ಧನ್ ರಂತಹವರೊಂದಿಗೆ ದ್ವಾರಕೀಶ್ ನಟಿಸಿದ್ದಾರೆ. ಕೊನೆಯದಾಗಿ ಅವರು ಚೌಕ ಸಿನೆಮಾದಲ್ಲಿ ನಟಿಸಿದ್ದರು.

RELATED ARTICLES
- Advertisment -
Google search engine

Most Popular