ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸಮೀಪದ ಸುಜೀರು ಶ್ರೀ ದೇವಕೀ ಕೃಷ್ಣ ರವಳನಾಥ ದೇವಸ್ಥಾನಕ್ಕೆ ಸೋಮವಾರ ಮುಂಜಾನೆ ಕಳ್ಳರು ನುಗ್ಗಿ ರೂ ೨ಲಕ್ಷಕ್ಕೂ ಮಿಕ್ಕಿ ಮೌಲ್ಯದ ನಗ ಮತ್ತು ನಗದು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ಸುಮಾರು ಒಂದೂವರೆ ಕಿಲೋ ತೂಕದ ಬೆಳ್ಳಿ ಪೀಠ, ಮೂಗುತಿ ಸಹಿತ ೩ ಪವನ್ ಚಿನ್ನಾಭರಣ, ದೇವರ ಕೊಡೆ, ೨ ಕಿಲೋ ಬೆಳ್ಳಿ ಮತ್ತು ಹುಂಡಿ ಹಣ ಕಳುವಾಗಿದೆ. ಸೋಮವಾರ ಮುಂಜಾನೆ ಸುಮಾರು ೩.೩೦ ಗಂಟೆಗೆ ದೇವಳದ ಹಿಂಬಾಗಿಲು ಚಿಲಕ ಮುರಿದು ಒಳ ಪ್ರವೇಶಿಸಿದ್ದ ಮೂವರು ಕಳ್ಳರು ಎಲ್ಲಾ ಚಿನ್ನಾಭರಣವನ್ನು ಚೀಲವೊಂದರಲ್ಲಿ ಕಟ್ಟಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇ ವೇಳೆ ನಾಯಿ ಬೊಗಳಿದಾಗ ಪಕ್ಕದಲ್ಲೇ ಇದ್ದ ಅರ್ಚಕರು ಎದ್ದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಫರಂಗಿಪೇಟೆ: ದೇವಳದಿಂದ ನಗ ನಗದು ಕಳವು
RELATED ARTICLES