ಉಡುಪಿ:ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿ ಉಡುಪಿ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘ ಉಡುಪಿ ಇಲಾಖೆಯಲ್ಲಿ ಸುಮಾರು 28 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ವಯೋ ನಿವೃತ್ತಿ ಹೊಂದಿದ್ದ ಕಾರ್ಯಪಾಲಕ ಅಭಿಯಂತರಾದ ದಿನೇಶ್ ರವರ ಬೀಳ್ಕೊಡುಗೆ ಸಮಾರಂಭ ಉಡುಪಿ ಪುರಭವನದಲ್ಲಿ ಶನಿವಾರ ಜರಗಿತು. ಮುಖ್ಯ ಅತಿಥಿಯಾದ ಇಲಾಖೆಯ ಮಂಗಳೂರು ವೃತ್ತ ಅಧೀಕ್ಷಕ ಅಭಿಯಂತರರು ಗೋಕುಲದಾಸ್ , ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ ಅಮರನಾಥ ಜೈನ್ ಜೊತೆಗೂಡಿ ಕಾರ್ಯಪಾಲಕ ಅಭಿಯಂತರಾದ ದಿನೇಶ್ ದಂಪತಿಯರನ್ನುಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘ ವತಿಯಿಂದ ವಾದಿರಾಜ್ ಶೆಟ್ಟಿ ಮತ್ತು ಪದಾಧಿಕಾರಿಗಳು ದಿನೇಶ್ ರವರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು .
ಉಡುಪಿ ವಿಭಾಗದ ಲೆಕ್ಕಾಧಿಕಾರಿ ಮಂಜುನಾಥ್ ಸ್ವಾಗತಿಸಿದರು. ಕು . ನಿಧಿ ಪೈ ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆಗೈದರು.