ಬೆಂಗಳೂರು: ವಿಶ್ವದ ಅತಿ ದೊಡ್ಡ ಜ್ಯುವೆಲ್ಲರಿ ಗ್ರೂಪ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಜೆಮ್‌ಸ್ಟೋನ್ ಆಭರಣ ಉತ್ಸವದ ಅಂಗವಾಗಿ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಗ್ರಾಹಕಕರಿಗೆ ಚಿನ್ನದಲ್ಲಿ ಸಿದ್ಧಪಡಿಸಲಾದ ಮತ್ತು ಅಮೂಲ್ಯವಾದ ರತ್ನದ ಕಲ್ಲುಗಳು, ಅನ್‌ಕಟ್ ವಜ್ರಗಳು ಮತ್ತು ಪೋಲ್ಕಿಗಳಿಂದ ಸಿಂಗರಿಸಲ್ಪಟ್ಟ ಆಭರಣಗಳ ಅದ್ಭುತ ಶ್ರೇಣಿಯನ್ನು ಅನ್ವೇಷಣೆ ಮಾಡಲು ಸೊಗಸಾದ ಕರಕುಶಲತೆ ಮತ್ತು ನಿರಂತರ ಸೊಬಗಿನ ಉತ್ಸವವು ಅವಕಾಶ ಕಲ್ಪಿಸುತ್ತಿದೆ.
ಈ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಜೆಮ್‌ಸ್ಟೋನ್ ಮತ್ತು ಅನ್‌ಕಟ್ ಆಭರಣಗಳ ಮೇಲಿನ ಮೇಕಿಂಗ್ ಶುಲ್ಕಗಳಲ್ಲಿ ಶೇ.೨೫ ರಷ್ಟು ಫ್ಲಾಟ್ ರಿಯಾಯ್ತಿ ಮತ್ತು ಪೋಲ್ಕಿ ಆಭರಣದ ಸ್ಟೋನ್ ಮೌಲ್ಯದ ಮೇಲೆ ಶೇ.೨೫ ರಷ್ಟು ಫ್ಲಾಟ್ ರಿಯಾಯ್ತಿ ಪಡೆಯಲಿದ್ದಾರೆ. ಈ ವಿಶೇಷ ಕೊಡುಗೆಗಳು ಜನಪ್ರಿಯ ಎರಾ, ಪ್ರೆಸಿಯಾ ಮತ್ತು ವಿರಾಝ್ ಸಂಗ್ರಹಗಳಿಗೆ ಸಿಗಲಿವೆ. ಈ ಬ್ರಾö್ಯಂಡ್‌ಗಳು ತಮ್ಮ ಅನನ್ಯವಾದ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ಬ್ಲೆಂಡ್‌ಗೆ ಹೆಸರುವಾಸಿಯಾಗಿವೆ. ಇದಲ್ಲದೇ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಹಳೆಯ ಚಿನ್ನದ ವಿನಿಮಯದಲ್ಲಿ ಶೂನ್ಯ ಕಡಿತ, ಖಚಿತ ಬೈಬ್ಯಾಕ್, ತಡೆರಹಿತ ಮತ್ತು ಉಡುಗೊರೆಯುಕ್ತ ಶಾಪಿಂಗ್ ಅನುಭವವನ್ನು ನೀಡುತ್ತದೆ. ಈ ಕೊಡುಗೆಗಳು ಸೆಪ್ಟೆಂಬರ್ ೮, ೨೦೨೪ ರವರೆಗೆ ಲಭ್ಯವಿರುತ್ತವೆ. ಗ್ರಾಹಕರು ತಮಗಿಷ್ಟವಾದ ಆಭರಣವನ್ನು ಮುಂಗಡವಾಗಿ ೧೦% ಪಾವತಿಸಿ ಕಾಯ್ದಿರಿಸಿಕೊಳ್ಳಬಹುದು. ಈ ಖಾತರಿ ಯೋಜನೆಯಡಿಯಲ್ಲಿ ಗ್ರಾಹಕರು ಬುಕ್ ಮಾಡಿದ ದಿನದ ದರ ಅಥವಾ ಖರೀದಿಸುವ ದಿನದಲ್ಲಿ ಇರುವ ದರ ಇವುಗಳಲ್ಲಿ ಯಾವುದು ಕಡಿಮೆ ಇರುತ್ತದೋ ಆ ಬೆಲೆಗೆ ಆಭರಣವನ್ನು ಖರೀದಿಸಬಹುದಾಗಿದೆ. ಶೇ.೧೦೦ ರಷ್ಟು ಊUIಆ ಹಾಲ್‌ಮಾರ್ಕ್ ಮತ್ತು ಪರಿಪೂರ್ಣ ಶುದ್ಧತೆಯ ಆಭರಣಗಳನ್ನು ಗ್ರಾಹಕರಿಗೆ ನೀಡುತ್ತಿರುವ ಮೊದಲ ಆಭರಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಪಾತ್ರವಾಗಿದೆ.
ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, “ಮಲಬಾರ್ ಗೋಲ್ಡ್ & ಡೈಮಂಡ್ಸ್ ನಮ್ಮ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿಯೂ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಎತ್ತಿಹಿಡಿಯುವ ಮೂಲಕ ಅತ್ಯಂತ ವಿಶ್ವಾಸಾರ್ಹವಾದ ಆಭರಣ ಸಂಸ್ಥೆ ಎಂಬ ಖ್ಯಾತಿಯನ್ನು ಗಳಿಸಿದೆ. ಜೆಮ್‌ಸ್ಟೋನ್ ಉತ್ಸವವನ್ನು ಆಚರಿಸಲು ನಾವು ಕರ್ನಾಟಕದ ನಮ್ಮೆಲ್ಲಾ ಸ್ಟೋರ್‌ಗಳಲ್ಲಿ ಈ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದ್ದೇವೆ. ಚಿನ್ನದ ಗಣಿಗಾರಿಕೆಯಿಂದ ಹಿಡಿದು ಗ್ರಾಹಕರ ಕೈಗೆ ಹಸ್ತಾಂತರಿಸುವವರೆಗೆ ಪಾರದರ್ಶಕತೆಯನ್ನು ಪಾಲಿಸುತ್ತಿದ್ದೇವೆ’’ ಎಂದು ತಿಳಿಸಿದರು.
ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಚಿನ್ನಾಭರಣಗಳನ್ನು ನೀಡಲು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಬದ್ಧವಾಗಿರುವ ಸಂಸ್ಥೆಯಾಗಿದೆ. ಬ್ರಾö್ಯಂಡ್ ನ್ಯಾಯಯುತ ಬೆಲೆಯಲ್ಲಿ ಆಭರಣಗಳ ವೈವಿಧ್ಯಮಯ ಆಯ್ಕೆಯನ್ನು ನೀಡುತ್ತದೆ ಮತ್ತು ಭಾರತದಲ್ಲಿನ ತನ್ನ ಎಲ್ಲಾ ಸ್ಟೋರ್‌ಗಳಲ್ಲಿ ಚಿನ್ನಕ್ಕೆ ಒಂದೇ ಬೆಲೆಯನ್ನು ನಿಗದಿ ಮಾಡುವ ಮೂಲಕ ಸ್ಥಿರತೆಯನ್ನು ಖಚಿತಪಡಿಸುತ್ತದೆ. ಜವಾಬ್ದಾರಿಯುತ ಆಭರಣ ಸಂಸ್ಥೆಯಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ದೇಶವ್ಯಾಪಿ ಪಾರದರ್ಶಕ ಮತ್ತು ಏಕರೂಪದ ಬೆಲೆಯನ್ನು ನೀಡಲು ಬದ್ಧವಾಗಿದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಕೇವಲ ಒಂದು ಆಭರಣ ಬ್ರಾö್ಯಂಡ್ ಆಗಿಲ್ಲ, ಇದರ ಜೊತೆಗೆ ಒಂದು ಜವಾಬ್ದಾರಿಯುತ ಆಭರಣ ಸಂಸ್ಥೆಯಾಗಿದೆ. ಪಾರದರ್ಶಕತೆ, ತತ್ತ್ವಗಳು ಮತ್ತು ಗ್ರಾಹಕರ ತೃಪ್ತಿಯನ್ನು ಉನ್ನತ ಮಟ್ಟದಲ್ಲಿ ನೀಡಲು ಬದ್ಧವಾಗಿರುವ ಸಂಸ್ಥೆಯಾಗಿದೆ. ಎಲ್ಲಾ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆಯ ಖಾತರಿಯನ್ನು ನೀಡುವ ಬ್ರಾö್ಯಂಡ್ ಆಗಿದ್ದು, ತನ್ನೆಲ್ಲಾ ಆಭರಣಗಳಿಗೆ ಜೀವನಪರ್ಯಂತ ನಿರ್ವಹಣೆ ಮಾಡುತ್ತದೆ ಮತ್ತು ಚಿನ್ನ ಮತ್ತು ವಜ್ರಗಳ ವಿನಿಮಯಕ್ಕೆ ಶೇ.೧೦೦ ರಷ್ಟು ಮೌಲ್ಯವನ್ನು ನೀಡುತ್ತದೆ. ಎಲ್ಲಾ ವಜ್ರಗಳನ್ನು ಪರೀಕ್ಷೆ ಮತ್ತು ಪ್ರಮಾಣೀಕರಿಸಲಾಗುತ್ತದೆ ಹಾಗೂ ಎಲ್ಲಾ ಉತ್ಪನ್ನಗಳಿಗೆ ಬೈಬ್ಯಾಕ್ ಸೌಲಭ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಭರಣಗಳಿಗೆ ಉಚಿತ ವಿಮೆ, ಶೇ.೧೦೦ ರಷ್ಟು ಊUIಆ ಅನುಸರಣೆಯ ಚಿನ್ನ, ಜವಾಬ್ದಾರಿಯುತ ಮೂಲದ ಉತ್ಪನ್ನಗಳು ಮತ್ತು ನ್ಯಾಯಯುತ ಕಾರ್ಮಿಕ ಪದ್ಧತಿಗಳ ಪಾಲನೆ ಮತ್ತು ದೇಶದ ಎಲ್ಲಾ ಸ್ಟೋರ್‌ಗಳಲ್ಲಿ ಸ್ಥಿರವಾದ ಬೆಲೆಯನ್ನು ನೀಡುತ್ತದೆ.