Tuesday, April 22, 2025
Homeರಾಷ್ಟ್ರೀಯಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯ ಕೊಲೆ

ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯ ಕೊಲೆ

ನೋಯ್ಡಾ : ಬೇರೆ ಜಾತಿಯವನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮಗಳ ಬೇರೆ ಜಾತಿಯ ಹುಡುಗನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ಅರಗಿಸಿಕೊಳ್ಳಲಾಗದೆ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಅದಕ್ಕೆ ತಮ್ಮ ಮಗನ ಸಹಾಯವನ್ನೂ ಪಡೆದಿದ್ದರು.

ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಡುವ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ನೇಹಾ ರಾಥೋಡ್ ಬೇರೆ ಜಾತಿಯ ವ್ಯಕ್ತಿಯೊಂದಿಗೆ ಹೊಂದಿದ್ದ ಪ್ರೇಮ ಸಂಬಂಧದಿಂದ ತಂದೆ-ಮಗ ಇಬ್ಬರೂ ಕೋಪಗೊಂಡಿದ್ದರು.

23 ವರ್ಷದ  ಯುವತಿ ಉತ್ತರ ಪ್ರದೇಶದ ಹಾಪುರ್ ನಿವಾಸಿ ಸೂರಜ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಇದಕ್ಕೆ ಆಕೆಯ ಕುಟುಂಬದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ನೋಯ್ಡಾ ಸೆಂಟ್ರಲ್‌ನ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ.

ಆಕೆಯ ಕುಟುಂಬವು ಸೂರಜ್‌ನನ್ನು ಭೇಟಿಯಾಗುವುದನ್ನು ಹಲವು ಬಾರಿ ತಡೆದಿತ್ತು, ಆದರೆ ಅವಳು ಈ ಎಲ್ಲವನ್ನೂ ಧಿಕ್ಕರಿಸಿ ಮಾರ್ಚ್ 11 ರಂದು ಗಾಜಿಯಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ಸೂರಜ್‌ನನ್ನು ವಿವಾಹವಾಗಿದ್ದಳು. ಅವರ ವಿವಾಹದ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಿ ಭಾನು ರಾಥೋಡ್ ಮತ್ತು ಅವರ ಮಗ ಹಿಮಾಂಶು ರಾಥೋಡ್ ಮಾರ್ಚ್ 12 ರ ಬೆಳಗ್ಗೆ ನೇಹಾಳನ್ನು ಕೊಲೆ ಮಾಡಿದ್ದರು.

ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು.

ಪೊಲೀಸ್ ಕ್ಷೇತ್ರ ಘಟಕವು ಅಪರಾಧದ ಸ್ಥಳವನ್ನು ಪರಿಶೀಲಿಸಿತು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗಿದ್ದು, ಇತರ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಹಾಪುರದಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಆ ಯುವಕ ಪ್ರಸ್ತುತ ಹಾಪುರದಲ್ಲಿ ಪಿಕಪ್ ಟ್ರಕ್ ಓಡಿಸುತ್ತಾನೆ. ಆ ಯುವಕರು ಜಾಟ್ ಸಮುದಾಯಕ್ಕೆ ಸೇರಿದವನಾಗಿದ್ದು. ಆದರೆ ಹುಡುಗಿ ತೇಲಿ ಸಮುದಾಯಕ್ಕೆ ಸೇರಿದವಳು.

RELATED ARTICLES
- Advertisment -
Google search engine

Most Popular