ಹಾವೇರಿ: ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹಾವೇರಿಯ ಬಸವೇಶ್ವರ ನಗರದಲ್ಲಿ ನಡೆದಿದೆ. ತಂದೆ ಮಗನ ಜೊತೆಯಾದ ಸಾವಿನಿಂದ ಗ್ರಾಮಸ್ಥರು ದುಃಖಿತರಾಗಿದ್ದಾರೆ. ತಂದೆ ಡಾ. ವೀರಭದ್ರಪ್ಪ ಗುಂಡಗಾವಿ ಮಗ ಡಾ. ವಿನಯ ಗುಂಡಗಾವಿ ಮೃತ ದುರ್ದೈವಿಗಳು.
ವೃತ್ತಿಯಲ್ಲಿ ಇಬ್ಬರೂ ವೈದ್ಯರು. ಆದರೂ ಆಕಸ್ಮಿಕವಾಗಿ ಮಗ ಡಾ. ವಿನಯ ಮೊದಲು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ವಿಚಾರ ಕೇಳಿ ತಂದೆ ವೀರಭದ್ರಪ್ಪ ಅವರೂ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಆ ಮೂಲಕ ಒಂದೇ ದಿನ ತಂದೆ-ಮಗ ಮೃತಪಟ್ಟಂತಾಗಿದೆ.