Wednesday, April 23, 2025
Homeಬಂಟ್ವಾಳಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟ‌ರ್ ನೀಡಿದ ತಂದೆಗೆ ಬಿತ್ತು ದಂಡ – ದಂಡದ -ಮೊತ್ತವೆಷ್ಟು ಗೊತ್ತಾ?!

ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟ‌ರ್ ನೀಡಿದ ತಂದೆಗೆ ಬಿತ್ತು ದಂಡ – ದಂಡದ -ಮೊತ್ತವೆಷ್ಟು ಗೊತ್ತಾ?!

ಬಂಟ್ವಾಳ:(ಮಾ.6) ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟರ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡಿಷನಲ್‌ ಸಿವಿಲ್‌ ನ್ಯಾಯಾಲಯ ಹಾಗೂ ಜೆಎಂಎಫ್.ಸಿ ಬಂಟ್ವಾಳ ಆರೋಪಿ ತಂದೆಗೆ 26 ಸಾವಿರ ರೂ. ದಂಡ ವಿಧಿಸಿದೆ.

ಬಿ.ಸಿ.ರೋಡು ಪರ್ಲಿಯಾದಲ್ಲಿ ಸ್ಥಳೀಯ ನಿವಾಸಿ ಸಮೀರ್ ಎಂಬಾತ ತನ್ನ ಸ್ಕೂಟರನ್ನು ಪುತ್ರನಿಗೆ ನೀಡಿದ್ದು, ಆತ ಸ್ಕೂಟರ್ ಚಾಲನೆ ಮಾಡುತ್ತಿರುವ ವೇಳೆ ಬಂಟ್ವಾಳ ಸಂಚಾರ ಪೊಲೀಸಿಗೆ ಸಿಕ್ಕಿ ಬಿದ್ದಿದ್ದನು.

ಈ ವೇಳೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ನ್ಯಾಯಾಲಯ ಸ್ಕೂಟರಿನ ಆರ್ ಸಿ ಓವರ್ ಆಗಿರುವ ತಂದೆಗೆ ದಂಡ ವಿಧಿಸಿದೆ.

RELATED ARTICLES
- Advertisment -
Google search engine

Most Popular