Saturday, June 14, 2025
Homeಅಪರಾಧಜಮೀನು ಮಾರಿದ್ದ ಹಣಕ್ಕಾಗಿ ಮಲಗಿದ್ದ ಮಗನ ಕೊಚ್ಚಿ ಕೊಲೆ ಮಾಡಿದ ತಂದೆ

ಜಮೀನು ಮಾರಿದ್ದ ಹಣಕ್ಕಾಗಿ ಮಲಗಿದ್ದ ಮಗನ ಕೊಚ್ಚಿ ಕೊಲೆ ಮಾಡಿದ ತಂದೆ

ರಾಮನಗರ: ಜಮೀನು ಮಾರಿದ ದುಡ್ಡಿಗಾಗಿ ಮಲಗಿದ್ದ ಮಗನನ್ನೇ ತಂದೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಲಕ್ಕೋಜನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

31 ವರ್ಷದ ಮಗ ಭಾಸ್ಕರ್ ನನ್ನು 60 ವರ್ಷದ ತಂದೆ ಕೃಷ್ಣಪ್ಪ ಎಂಬಾತ ಹತ್ಯೆಗೈದಿದ್ದಾನೆ. ಜಮೀನು ಮಾರಿದ ಹಣಕ್ಕಾಗಿ ತಂದೆ-ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ರಾತ್ರಿಯೂ ಈ ಬಗ್ಗೆ ಗಲಾಟೆ ನಡೆದಿದೆ. ನಂತರ ಮಗ ಮಲಗಿದ್ದಾಗ ತಂದೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular