ಇಂಡಿಯನ್ ಕ್ಲಬ್ ನ ಆಶ್ರಯದಲ್ಲಿ ಭಾರತೀಯ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಪ್ರಸ್ತುತ ಪಡಿಸುವ ತುಳುನಾಡ ಉತ್ಸವ 2023 ಕಾರ್ಯಕ್ರಮವು ಫೆಬ್ರವರಿ 03 ,ರಂದು 2023ರಂದು ಸಂಜೆ 5 ಗಂಟೆಗೆ ಇಂಡಿಯನ್ ಕ್ಲಬ್ ಬಹರೈನ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವು ತುಳುನಾಡಿನ ವಿವಿಧ ಸಂಸ್ಕ್ರತಿಯ ನ್ನು ಪ್ರದರ್ಶಿಸುತ್ತದೆ. ನಂತರ ಪರಮಾನಂದ ಸಾಲಿಯಾನ್ ನಿರ್ದೇಶನದಲ್ಲಿ ನಮ್ಮ ಸದಸ್ಯರು ಮತ್ತು ಆಹ್ವಾನಿತ ಕಲಾವಿದರು ರೂಪಿಸಿದ ಬಿರ್ದ್ ಬಿರ್ಸಾದಿಗೆದ ತುಳುನಾಡು ಎನ್ನುವ ನಾಟಕ ಪ್ರದರ್ಶನ ನಡೆಯಲಿದೆ.
ಈ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ. ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಸಚಿವರು ಕರ್ನಾಟಕ ವರ್ಗ ಕಲ್ಯಾಣ ಇಲಾಖೆ, ಶ್ರೀ. ಸುಮನ್ ತಲ್ವಾರ್ ಭಾರತೀಯ ಸಿನಿಮಾ ನಟ,ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮುಂಬಳದ ಅಧ್ಯಕ್ಷ ಶ್ರೀ. ರಾಜಶೇಖರ್ ಕೋಟ್ಯಾನ್, ವಕೀಲರು & ನೋಟರಿ ಮತ್ತು ಕೋಶಾಧಿಕಾರಿ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಶ್ರೀ. ಪದ್ಮರಾಜ್ ಆರ್ ,ದಿ ಇಂಡಿಯನ್ ಕ್ಲಬ್, ಬಹ್ರೇನ್ ಅಧ್ಯಕ್ಷ ಶ್ರೀ. ಕೆ ಎಂ ಚೆರಿಯನ್, ಬಿಲ್ಲವರ ಅಸೋಸಿಯೇಶನ್
ಮುಂಬೈ ಅಧ್ಯಕ್ಷ ಶ್ರೀ. ಹರೀಶ್ ಜಿ ಅಮೀನ್ , ಹಾಗೂ ಗೌರವ ಉಪಸ್ಥಿತಿ ಯೂತ್ ಬಿಲ್ಲವ ಉಡುಪಿ ಅಧ್ಯಕ್ಷ ಶ್ರೀ ಪ್ರವೀಣ್ ಪೂಜಾರಿ, ಬಿಲ್ಲವ ಸೇವಾ ಸಂಘ ಬನ್ನಂಜೆ ಉಡುಪಿ ಅಧ್ಯಕ್ಷ ಶ್ರೀ ಬಿ. ಮಾಧವ ಪೂಜಾರಿ, ಮುಂಬೈ ಬಿಲ್ಲವ ಸಂಘ ಉಪಾಧ್ಯಕ್ಷ ಶ್ರೀ ಸುರೇಶ್ ಕುಮಾರ್, ಮುಂಬೈ ಹೋಟೆಲ್್ ಉದ್ಯಮಿ ಶ್ರೀ ಹರೀಶ್ ಸಾಲಿಯಾನ್, ಹಾಗೂ ಕಾರ್ಯಕ್ರಮ ಆಯೋಜಕರಾದ ಬಹ್ರೇನ್ ಮೂಲದ ಭಾರತೀಯ ಉದ್ಯಮಿ ಮತ್ತು ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ವಿಜೇತ ಶ್ರೀ. ಕೆ ಜಿ ಬಾಬುರಾಜನ್, ಕೋಟಿ ಚೆನ್ನಯ ದರ್ಶನ್ ಪಾತ್ರಿ ಶ್ರೀ. ರಮೇಶ್ ಮತ್ತು ಉಮೇಶ್ , GSS-ಬಹ್ರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ & 2022 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರು ಶ್ರೀ. ರಾಜ್‌ಕುಮಾರ್ ಉಪಸ್ಥಿತರಿರಲಿರುವರು.
-ಗಣೇಶ್ ಮಾಣಿಲ ಬಹರೈನ್
ಅಂತರಾಷ್ಟೀಯ ಗೌರವ ಸಂಪಾದಕರು ತುಳುನಾಡು ವಾರ್ತೆ