ಮೂಲ್ಕಿ: ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಬೆಳ್ಳಾಯರು ಪ್ರತಿಷ್ಠಾ ವಧಂತಿ ರಂಗಪೂಜಾ ಸಹಿತ ವಾರ್ಷಿಕ ಜಾತ್ರಾ ಮಹೋತ್ಸವವು ಫೆಬ್ರವರಿ 10, 2025 ರಂದು ಸೋಮವಾರ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ.
ಕಾರ್ಯಕ್ರಮಗಳ ವಿವರ
ಪೂರ್ವಾಹ್ನ ಗಂಟೆ 8.00ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ತೋರಣ ಪ್ರತಿಷ್ಟೆ, ಪುಣ್ಯಾಹ ಪಂಚಗವ್ಯ 4 ಕಾಯಿ ಗಣಹೋಮ. ಕಲಶಾಧಿವಾಸ ಹೋಮ. 25 ಕಲಶ ಪ್ರತಿಷ್ಠಾ ಪರಿವಾರ ದೇವತಾ ಕಲಶ ಪ್ರತಿಷ್ಠಾ.
ಪೂರ್ವಾಹ್ನ ಗಂಟೆ: 11.00 ಕ್ಕೆ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಬಲಿ ಹೊರಟು ಪಲ್ಲಪೂಜೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7 ಗಂಟೆ ರಂಗಪೂಜೆ, 8 ಗಂಟೆಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ. ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.