ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟುವಿನಲ್ಲಿ ದಿನಾಂಕ: 13-02-2025 ಗುರುವಾರದಿಂದ 16-02-2025 ಆದಿತ್ಯವಾರದವರೆಗೆ ಬ್ರಹ್ಮರಥೋತ್ಸವ ಸಂಭ್ರಮ ನಡೆಯಲಿದೆ.
ದಿನಾಂಕ: 13-02-2025 ಗುರುವಾರ
ಗಣಹೋಮ, ಗ್ರಹಹೋಮ, ತತ್ವ ಹೋಮ, ಕಲಾಶಾಧಿವಾಸ ಹೋಮ, ಕಲಾಶಾಭಿಷೇಕಾಗಳು, ಮಹಾಪೂಜೆ, ಧ್ವಜವಾಹನ ಸಹಿತ ಪರವಾರ ಬಲಿ, ಧ್ವಜರೋಹಾಣಾದಿಗಳು, ಮಹಾಪೂಜೆ, 12-30ಕ್ಕೆ ಅನ್ನಸಂತರ್ಪಣೆ, ಸಂಜೆ ಉತ್ಸವಾದಿಗಳು ಹಾಗೂ ಕಟ್ಟೆಪೂಜೆ.
ದಿನಾಂಕ: 14-02-2025 ಶುಕ್ರವಾರ
ಶ್ರೀ ದೇವರಿಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಬಲಿಯಾದಿಗಳು 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಉತ್ಸವಾದಿಗಳು ಹಾಗೂ ಕಟ್ಟೆಪೂಜೆ, ಅಷ್ಟವದಾನ ಸೇವೆಗಳು ನಡೆಯಲಿದೆ.
ದಿನಾಂಕ: 15-02-2025 ಶನಿವಾರ
ಬೆಳಿಗ್ಗೆ ರಥಾದಿವಾಸ ಹೋಮ, ಕಲಾಶಾಭಿಏಕಾದಿಗಳು, ಬಲಿ (11.05ಕ್ಕೆ ಸಲುವ ಮೇಷ ಲಗ್ನದಲ್ಲಿ) ರಥಾರೋಹಣ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿರುವುದು.
ಸಂಜೆ 5.30ಕ್ಕೆ ಶ್ರೀ ಶನೀಶ್ವರ ಸ್ವಾಮಿಯ ಬ್ರಹ್ಮರಥೋತ್ಸವ, ವಿವಿಧ ಜಿಲ್ಲೆಯ ತಂಡಗಳಿಂದ
ಸಾಂಸ್ಕೃತಿಕ ನೃತ್ಯ ವೈಭವ ನಂತರ ಅದೇ ದಿನ ರಾತ್ರಿ 9 ಗಂಟೆಗೆ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಿಗಂದೂರು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿರುವುದು.

ದಿನಾಂಕ: 16-02-2025 ಆದಿತ್ಯವಾರ ಬೆಳಿಗ್ಗೆ ಯಾತ್ರಾ ಹೋಮ, ಅವಭ್ರತಃ ಸಂಹಾರ ಬಲಿ, ಧ್ವಜಾವರೋಹಣ, ಪ್ರಸನ್ನ ಪೂಜೆ, ನಂತರ ಮಹಾಪೂಜೆ, 12-30ಕ್ಕೆ ಅನ್ನಸಂತರ್ಪಣೆ ನಡೆಯಲಿರುವುದು.
ಈ ಎಲ್ಲಾ ಕಾರ್ಯಕ್ರಮಗಳು ಪುರೋಹಿತರು ಹಾಗೂ ತಂತ್ರಿಗಳಾದ ಶ್ರೀ ಗುರುರಾಜ್ ಸೋಮಾಯಾಜಿ ಹೊಕ್ಕೊಳಿಮೆನೆ ಬೃಹ್ಮನಜೆಡ್ಡು ನೇರಳಕಟ್ಟೆ ಇವರ ಪೌರೋಹಿತ್ಯದಲ್ಲಿ ಜರುಗಲಿರುವುದು ಎಂದ ಪ್ರಕಟಣೆಗೆ ತಿಳಿಸಿದ್ದಾರೆ.