ಕಾರ್ಕಳ: ಕರಿಯಕಲ್ಲು ಸಾರ್ವಜನಿಕ ಶ್ರೀ ಸತ್ಯಸಾರಾಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ (ರಿ.) ವತಿಯಿಂದ ಕ್ಷೇತ್ರದಲ್ಲಿ 6ನೇ ವರ್ಷದ ವರ್ಧಂತಿ ಪ್ರಯುಕ್ತ ಗಗ್ಗರ ಸೇವೆಯು ದಿನಾಂಕ 16-02-2025 18-02-2023ನೇ ಮಂಗಳವಾರದ ವರೆಗೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಕೆ. ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮಗಳ ವಿವರ
ದಿನಾಂಕ 16-02-2025 ನೇ ರವಿವಾರ ಸಂಜೆ ಗಂಟೆ 7.15 ರಿಂದ ರಾತ್ರಿ ಗಂಟೆ 8.00 ರವರೆಗೆ ಸಮಿತಿಯ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 9.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ 9.30ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ಆತೇ ಪನೊಡಾತೆ’ ಸೂಪರ್ ಹಿಟ್ ನಾಟಕ ನಡೆಯಲಿದೆ.
ದಿನಾಂಕ: 17-2-2025ನೇ ಸೋಮವಾರ ಬೆಳಿಗ್ಗೆ 6.30 ರಿಂದ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾಹ, ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ, ಗಣಹೋಮ, ತೋರಣ ಮುಹೂರ್ತ ಬೆಳಿಗ್ಗೆ 8.30 ರಿಂದ ನಾಗದೇವರಿಗೆ ತನು ಪಂಚಾಮೃತ ತಂಬಿಲ ಸೇವೆ ತೋರಣ ಮುಹೂರ್ತ, ಬೆಳಿಗ್ಗೆ 9.30 ರಿಂದ ನವಕ ಕಲಶ ಆರಾಧನೆ, ಪ್ರಧಾನ ಹೋಮ, ಬೆಳಿಗ್ಗೆ 11.05ರಿಂದ ದೈವಗಳ ಕಲಶಾಭಿಷೇಕ ಪರ್ವ, ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ರಾತ್ರಿ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 9-30ರಿಂದ ಸತ್ಯಸಾರಮಣಿ ಹಲೇರಾ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ತದನಂತರ, ಒಂದಗುಳಿಗ, ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ ಜರುಗಲಿದೆ.
ದಿನಾಂಕ: 18-2-2025ನೇ ಮಂಗಳವಾರ ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9.30ರಿಂದ ಮಂತ್ರದೇವತೆ ದೈವದ ಗಗ್ಗರ ಸೇವೆ ತದನಂತರ ಮಹಾಂಕಾಳಿ ದೈವದ ಗಗ್ಗರ ಸೇವೆ ನಡೆಯಲಿದೆ..