Sunday, February 16, 2025
Homeಉಜಿರೆಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ

ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಮೂರ್ತಿಗೆ ಫೆ. 2 ರಂದು ಭಾನುವಾರ ಬೆಳಿಗ್ಗೆ ಗಂಟೆ 8.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ.

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು. ಇದಕ್ಕೆ ಪೂರ್ವಭಾವಿಯಾಗಿ ಫೆ. ಒಂದರಂದು ಶನಿವಾರ ಬೆಳಿಗ್ಯೆ ಗಂಟೆ 9 ರಿಂದ ರತ್ನಗಿರಿಯಲ್ಲಿ ತೋರಣಮುಹೂರ್ತ, ವಿಮಾನಶುದ್ಧಿ ಷೋಡಶ ಕಲಶಾಭಿಷೇಕ ಮತ್ತು ಸಂಜೆ ನಾಲ್ಕು ಗಂಟೆಯಿಂದ ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.

RELATED ARTICLES
- Advertisment -
Google search engine

Most Popular