ಶ್ರೀ ಬಂಟರ ಕೋಟಿಚೆನ್ನಯ್ಯರ ಗರಡಿ ಹಾಗೂ ಪಂಜುರ್ಲಿ ಮತ್ತು ಮಾರಿಶಿವರಾಯ ದೈವಸ್ಥಾನದಲ್ಲಿ ವರ್ಧಂತ್ಯೋತ್ಸವ ಹಾಗೂ ಗೆಂಡಸೇವೆಯು ಫೆಬ್ರವರಿ 04 ರಿಂದ ಫೆಬ್ರವರಿ 07 ರವರೆಗೆ ನಡೆಯಲಿದೆ.
ಕಾರ್ಯಕ್ರಮಗಳು
ದಿನಾಂಕ : 04-02-2025ನೇ ಮಂಗಳವಾರ ಸಂಜೆ 6:00 ಗಂಟೆಯಿಂದ ಪಂಜುರ್ಲಿ ಮತ್ತು ಸಪರಿವಾರ ದೈವಗಳಿಗೆ ಕಲಾಕಲಶ ಸ್ಥಾಪನೆ, ಕಲಶಾಭಿಷೇಕ, ಮಹಾಪೂಜೆ ಮತ್ತು ಮಾರಿ ಶಿವರಾಯ ದೈವಕ್ಕೆ ನವಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ, ದೈವ ಸಂದರ್ಶನ, ತೀರ್ಥ ಪ್ರಸಾದ ವಿತರಣೆ ನಡೆಯಲಿರುವುದು.
ದಿನಾಂಕ : 05-02-2025ನೇ ಬುಧವಾರ ರಾತ್ರಿ ಗೆಂಡಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು.
ರಾತ್ರಿ 9.00ರಿಂದ ಕೈಪಾಡಿ ಫ್ರೆಂಡ್ಸ್, ಟಿ. ಟಿ. ರಸ್ತೆ ಕೈಪಾಡಿ ಇವರ ಪ್ರಾಯೋಜಕತ್ವದಲ್ಲಿ ಅಭಿನವ ಕಲಾತಂಡ ಸಾಂಸ್ಕೃತಿಕ ಕಾರ್ಯಕ್ರಮ ರಾಂಗ್ ರೂಟ್ ನಡೆಯಲಿದೆ.

ದಿನಾಂಕ : 06-02-2025ನೇ ಗುರುವಾರ ಬೆಳಿಗ್ಗೆ ಗಂಟೆ 8:30 ರಿಂದ ಹಣ್ಣುಕಾಯಿ, ತುಲಾಭಾರ ಸೇವೆ ಮತ್ತು ಮಹಾಮಂಗಳಾರತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು.
ದಿನಾಂಕ : 07-02-2025ನೇ ಶುಕ್ರವಾರ ರಾತ್ರಿ ಗಂಟೆ 8:30 ರಿಂದ ಶ್ರೀ ಕ್ಷೇತ್ರ ಗೋಳಿಗರಡಿ ಮೇಳದವರಿಂದ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ಯಕ್ಷಗಾನ ಬಯಲಾಟ ನಡೆಯಲಿದೆ.