ಕಿನ್ನಿಗೋಳಿ:ಇತಿಹಾಸ ಪ್ರಸಿದ್ಧ ಐಕಳಬಾವ ಕಾಂತಬಾರೆ ಬೂದಬಾರೆ ಜೊಡುಕರೆ ಕಂಬಳ ವು ಮುಂದಿನ ಫೆ 4ರಂದು ನಡೆಯಲಿದೆ ಎಂದು ಐಕಳಬಾವ ಕಾಂತಬಾರೆ ಬೂದಬಾರೆ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಅವರು ಐಕಳ ಬಾವದಲ್ಲಿ ನಡೆದ ಐಕಳ ಕಂಬಳದ ಪೂರ್ವಿಭಾವಿ ಸಭೆಯಲ್ಲಿ ಮಾತನಾಡಿದರು.
ಈ ಬಾರಿಯೂ ಗ್ರಾಮಸ್ಧರ ಸಂಘ ಸಂಸ್ಧೆಗಳ ಸಹಕಾರ ಅಗತ್ಯ.ಕಂಬಳದ ಪೂರ್ವಿಭಾವಿಯಾಗಿ ಈ ಬಾರಿಯೂ ಐಕಳ ಕ್ರೀಡೋತ್ಸವ ನಡೆಯಲಿದೆ. ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು.ಕಂಬಳಕ್ಕೆ ಲಕ್ಷಕ್ಕೂ ಮೇಳ್ಪಟ್ಟು ಕಂಬಳಾಭಿಮಾನಿಗಳು ಸೇರುವ ನಿರೀಕ್ಷೆ ಇದ್ದು ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಕಾಂತಾರ ಚಲನಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ‌ ಚಿತ್ರದಲ್ಲಿ ಅಭಿನಯಿಸಿದ ಸ್ಧಳೀಯ ಪ್ರತಿಭೆಗಳನ್ನು ಕರೆಸಿ ಸನ್ಮಾನಿಲಾಗುವುದು ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಸಮಿತಿ‌ ಸದಸ್ಯ ದೇವಿಪ್ರಸಾದ್ ಶೆಟ್ಟಿಯವರನ್ನು ಕಂಬಳ ಸಮಿತಿ ವತಿಯಿಂದ ಗೌರವಿಸಲಾಯಿತು.

ಸಭೆಯಲ್ಲಿ ಈ ಸಂಧರ್ಭ ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ,ಸಂಚಾಲಕ ಐಕಳ ಮುರಳೀಧರ ಶೆಟ್ಟಿ,ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು,ಐಕಳ ಹಿರಿಮನೆ ಕೃಷ್ಣ ಮಾರ್ಲ,ಸ್ವರಾಜ್ ಶೆಟ್ಟಿ,ಸಾಯಿನಾಥ್ ಶೆಟ್ಟಿ,ದಯೇಶ್ ಐಕಳ,ರಘರಾಮ್ ಶೆಟ್ಟಿ ಏಳಿಂಜೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.