ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಮುಲ್ಕಿ ತಾಲೂಕು ಘಟಕ ಆಶ್ರಯದಲ್ಲಿ ಮುಲ್ಕಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ ಫೆಬ್ರವರಿ 8 ರಂದು ನಡೆಯಲಿರುವ ಪ್ರಯುಕ್ತ ಮುಲ್ಕಿ ತಾಲೂಕು ಸಮ್ಮೇಳನದ ಸಿದ್ಧತಾ ಸಭೆಯು ಐಕಳ ಪೊಂಪೈ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಪೊಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ.ಫಾ.ಓಸ್ವಾಲ್ಡ್ ಮೊಂತೆರೋ, ಮುಲ್ಕಿ ತಾಲೂಕು ಕಸಾಪ ಅಧ್ಯಕ್ಷರಾದ ಮಿಥುನ್ ಕೊಡೆತ್ತೂರು, ಮುಲ್ಕಿ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಜೊಸ್ಸಿ ಪಿಂಟೋ, ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಹೆರಿಕ್ ಪಾಯಸ್, ಪೊಂಪೈ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡೆಸ್ಮಂಡ್ ಡಿಮೊಲ್ಲೋ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷರಾದ ಧನಂಜಯ ಶೆಟ್ಟಿಗಾರ್, ಸೋಂದಾ ಭಾಸ್ಕರ ಭಟ್, ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ವೇದವ್ಯಾಸ ಉಡುಪ, ಸಚ್ಚಿದಾನಂದ ಉಡುಪ ,ಜಯಪಾಲ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪೃಥ್ವಿರಾಜ್ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಹಿಲ್ಡಾ ಡಿಸೋಜ ಆಯ್ಕೆಯಾದರು.
ಸಭೆಯಲ್ಲಿ ತಾಲೂಕು ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳು, ಹಾಗೂ ಸಾಹಿತ್ಯಪ್ರಿಯರು ಉಪಸ್ಥಿತರಿದ್ದರು.