ಕಟಪಾಡಿ: ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.9 ರಂದು ಮೊದಲ್ಗೊಂಡು ಫೆ. 17 ರವರೆಗೆ ನಡೆಯಲಿದೆ.
ಕಾರ್ಯಕ್ರಮಗಳು
ದಿನಾಂಕ 09-02-2025ನೇ ಆದಿತ್ಯವಾರ ಸಂಜೆ ಗಂಟೆ 3.00 ರಿಂದ : ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆ ರಾತ್ರಿ ಗಂಟೆ 7-00ರಿಂದ : ಪುಣ್ಯಾಹ, ಪ್ರಾಸಾದ ಶುದ್ದಿ, ಸಾಮೂಹಿಕ ಪ್ರಾರ್ಥನೆ, ಗುರು ಪೂಜೆ
ದಿನಾಂಕ 10-02-2025ನೇ ಸೋಮವಾರ ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ, ಗುರುಪೂಜೆ, ಕಂಕಣಧಾರಣೆ, ಧ್ವಜ ಪೂಜೆ ಪೂರ್ವಾಹ್ನ ಗಂಟೆ 11-05ಕ್ಕೆ : ಮೇಷ ಲಗ್ನದಲ್ಲಿ ಧ್ವಜಾರೋಹಣ
ಪೂರ್ವಾಹ್ನ ಗಂಟೆ 11-30ಕ್ಕೆ : ಶ್ರೀ ವಿಶ್ವನಾಥ ದೇವರು ಹಾಗೂ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ನವಕ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ಗಂಟೆ 6-00ಕ್ಕೆ : ಅಂಕುರ ಸ್ಥಾಪನೆ ರಾತ್ರಿ ಗಂಟೆ 7-00 ರಿಂದ : ಮಹಾಪೂಜೆ, ಭೂತಬಲಿ, ಉತ್ಸವ ರಾತ್ರಿ ಗಂಟೆ 8-00 ರಿಂದ : ಸಾಂಸ್ಕೃತಿಕ ಕಾರ್ಯಕ್ರಮ ಲಕ್ಷ್ಮಣ ಶಾಂತಿ ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ದಿನಾಂಕ 11-02-2025ನೇ ಮಂಗಳವಾರ ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ, ಪೂರ್ವಾಹ್ನ ಗಂಟೆ 10.00ಕ್ಕೆ
: ಶ್ರೀ ಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ನವಕ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ ಗಂಟೆ 7-00ರಿಂದ : ಮಹಾಪೂಜೆ, ಭೂತಬಲಿ, ಉತ್ಸವ,
ರಾತ್ರಿ ಗಂಟೆ 8-00 ರಿಂದ: ಸಾಂಸ್ಕೃತಿಕ ಕಾರ್ಯಕ್ರಮ ಸ್ವಾತಿ ಭಟ್ ಮತ್ತು ಬಳಗದವರಿಂದ ಸುಗಮ ಸಂಗೀತ
ದಿನಾಂಕ 12-02-2025ನೇ ಬುಧವಾರ ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ
ಪೂರ್ವಾಹ್ನ ಗಂಟೆ 10-00ಕ್ಕೆ : ಶ್ರೀ ಕೃಷ್ಣ ಮತ್ತು ಶ್ರೀ ಅಯ್ಯಪ್ಪ ದೇವರಿಗೆ ನವಕ ಕಲಶಾಭಿಷೇಕ
ಪೂರ್ವಾಹ್ನ ಗಂಟೆ 12-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ ಗಂಟೆ 7-00ರಿಂದ : ಮಹಾಪೂಜೆ, ಭೂತಬಲಿ, ಉತ್ಸವ ರಾತ್ರಿ ಗಂಟೆ 8-00 ರಿಂದ : ಸಾಂಸ್ಕೃತಿಕ ಕಾರ್ಯಕ್ರಮ ಬಲೇ ಚಾ ಪರ್ ಕಲಾವಿದರಿಂದ ತುಳು ಹಾಸ್ಯಮಯ ನಾಟಕ “ಏಲ್ಲಾ ಗ್ಯಾರಂಟಿ ಅತ್”
ದಿನಾಂಕ 13-02-2025ನೇ ಗುರುವಾರ ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ
ಪೂರ್ವಾಹ್ನ ಗಂಟೆ 10-00ಕ್ಕೆ : ಶ್ರೀ ನಾಗದೇವರಿಗೆ ಹಾಗೂ ಶ್ರೀ ಕಲ್ಕುಡ ದೈವಕ್ಕೆ ನವಕ ಕಲಶಾಭಿಷೇಕ
ಮಧ್ಯಾಹ್ನ ಗಂಟೆ 12-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ. ರಾತ್ರಿ ಗಂಟೆ 7-00ರಿಂದ : ಮಹಾಪೂಜೆ, ಭೂತಬಲಿ, ಉತ್ಸವ ರಾತ್ರಿ ಗಂಟೆ 8-00 ರಿಂದ
: ಸಾಂಸ್ಕೃತಿಕ ಕಾರ್ಯಕ್ರಮ – ಶ್ರೀ ನಾರಾಯಣಗುರು ಸೇವಾದಳದ ಪ್ರಾಯೋಜಕತ್ವದಲ್ಲಿ “ಸಾಂಸ್ಕೃತಿಕ ಕಾರ್ಯಕ್ರಮ ಮತ್ತು (2025ರ ರಾಜ್ಯ ಮಟ್ಟದ ತುಳುನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ) ಸುಮನಸಾ ಕೊಡವುರು ಇವರಿಂದ “ಈದಿ” ತುಳು ಸಾಮಾಜಿಕ ನಾಟಕ”
ದಿನಾಂಕ 14-02-2025ನೇ ಶುಕ್ರವಾರ ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ,
ಪೂರ್ವಾಹ್ನ ಗಂಟೆ 10-00 : ಮಹಾರುದ್ರ ಹೋಮ, ಶ್ರೀ ಪಾರ್ವತಿ ಪರಮೇಶ್ವರ ಯಜ್ಞ ಮಂಟಪ ಪ್ರವೇಶ.
ಮಧ್ಯಾಹ್ನ ಗಂಟೆ 12-00 : ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7-00ರಿಂದ : ಮಹಾಪೂಜೆ, ಭೂತಬಲಿ, ಉತ್ಸವ, ರಾತ್ರಿ ಗಂಟೆ 8-00ರಿಂದ : ಸಾಂಸ್ಕೃತಿಕ ಕಾರ್ಯಕ್ರಮ – ಶ್ರೀ ಗುರು ಮಹಿಳಾ ಕುಣಿತ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ರಾತ್ರಿ ಗಂಟೆ 9-00ರಿಂದ : ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಗೋಳಿಗರಡಿ ಸಾಸ್ತಾನ ಇವರಿಂದ ಯಕ್ಷಗಾನ ಪೌರಣಿಕ ಪ್ರಸಂಗ “ಪಾಂಚಜನ್ಯ”
ದಿನಾಂಕ 15-02-2025 ಪ್ರಾತಃಕಾಲ ಗಂಟೆ 6-00 ರಿಂದ : ಮಹಾಗಣಪತಿ ಹೋಮ, ಪೂರ್ವಾಹ್ನ ಗಂಟೆ 10-00ಕ್ಕೆ : ಶ್ರೀ ವಿಶ್ವನಾಥ ದೇವರಿಗೆ ಶತ ಸೀಯಾಳಾಭಿಷೇಕ ಪೂರ್ವಾಹ್ನ ಗಂಟೆ 12-00ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ ಗಂಟೆ 6-00ರಿಂದ : ಶ್ರೀ ಮಹಾಲಸಾ ನಾರಾಯಣಿ ಭಜನಾ ಮಂಡಳಿ, ಶಿರ್ವ ಇದರ ಸದಸ್ಯರಿಂದ ವಿಶೇಷ ಭಜನಾ ಕಾರ್ಯಕ್ರಮ ರಾತ್ರಿ ಗಂಟೆ 7-00ರಿಂದ : ಮಹಾಪೂಜೆ, ಭೂತಬಲಿ, ಉತ್ಸವ, ರಾತ್ರಿ ರಥೋತ್ಸವ, ಕೆರೆದೀಪೋತ್ಸವ, ಕಟ್ಟೆಪೂಜೆ ದಿನಾಂಕ 16-02-2025ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ : ತುಲಾಭಾರ ಸೇವೆ ಪೂರ್ವಾಹ್ನ ಗಂಟೆ 11-00ರಿಂದ : ಮಹಾಪೂಜೆ, ಹಗಲು ಉತ್ಸವ- ರಥೋತ್ಸವ, ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 4-00 ರಿಂದ : ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗ ಬೇಟೆ, ಶಯನೋತ್ಸವ, ಕವಾಟ ಬಂಧನ
ದಿನಾಂಕ 17-02-2025ನೇ ಸೋಮವಾರ ಪ್ರಾತಃಕಾಲ ಗಂಟೆ 6-00 ರಿಂದ : ಕವಾಟೋದ್ಘಾಟನೆ, ಮಹಾಗಣಪತಿ ಹೋಮ, ಅವಧೃತ, ಧ್ವಜ ಅವರೋಹಣ, ಕಲಶಾಭಿಷೇಕ, ಮಹಾಪೂಜೆ, ಗುರುಪೂಜೆ
ಮಧ್ಯಾಹ್ನ ಗಂಟೆ 12-30ಕ್ಕೆ : ಕಲ್ಕುಡ ಕೋಲದ ಚಪ್ಪರ ಮುಹೂರ್ತ ರಾತ್ರಿ ಗಂಟೆ 8-00ರಿಂದ : ಭಂಡಾರ ಇಳಿಯುವುದು ರಾತ್ರಿ ಗಂಟೆ 9-30 ಕ್ಕೆ : ಕಲ್ಕುಡ ಕೋಲ