ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಜನವರಿ 12 ರಿಂದ ಆರಂಭವಾಗಲಿದ್ದು, ಜನವರಿ 19ರವರೆಗೆ ನಡೆಯಲಿದೆ.
ದೇವಾಲಯದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ದಿನಾಂಕ 12.01.2025ರಿಂದ 14.01.2025ರವರೆಗೆ ಶ್ರೀ ದೇವಳದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರೋತ್ಸವ ನಡೆಯಲಿದೆ.
ದಿನಾಂಕ 12.01.2025ನೇ ಆದಿತ್ಯವಾರ ಬೆಳಗ್ಗೆ ಗಂಟೆ 09.00ರಿಂದ ಬಲಿವಾಡು ಶೇಖರಣೆ, ಹಸಿರುವಾಣಿ ಹೊರೆಕಾಣಿಕೆ ಸಂಗ್ರಹ, ಸಂಜೆ ಗಂಟೆ 06.00ರಿಂದ ಉಗ್ರಾಣ ತುಂಬಿಸುವುದು, ರಾತ್ರಿ ಗಂಟೆ 08.00ರಿಂದ ಮಹಾಪೂಜೆ, ಮಹಾ ಗಣಪತಿ ಪೂಜೆ, ಅತ್ತಾಳ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ನಡೆಯಲಿದೆ. ರಾತ್ರಿ ಗಂಟೆ 07.00ರಿಂದ ವಿದುಷಿ ಶ್ರೀಮತಿ ಸುಜಾತ ಸುಧೀರ್ – ನಾಟ್ಯಶಿವ ನೃತ್ಯಶಾಲೆ ಕಾಸರಗೋಡು ಇವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ದಿನಾಂಕ 13.01.2025ನೇ ಸೋಮವಾರ ಪ್ರಾತಃಕಾಲ 06.30ಕ್ಕೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನದೊಂದಿಗೆ, ದೇವರಿಗೆ ಸ್ವರ್ಣಗಿಂಡಿ, ಸ್ವರ್ಣಾಭರಣಗಳನ್ನು ಅರ್ಪಿಸುವುದು, ದ್ವಾರಪಾಲಕರಾದ ಜಯ-ವಿಜಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಅಶ್ವತ್ಥಕಟ್ಟೆಯ ಲೋಕಾರ್ಪಣೆ, ಬೆಳಗ್ಗೆ ಗಂಟೆ 07.00ಕ್ಕೆ ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ಹೊರಟು, ತೀರ್ಥ ತರುವುದು, ಬೆಳಗ್ಗೆ ಗಂಟೆ 08.00ರಿಂದ ಮಹಾಗಣಪತಿ ಹವನ, ನವಕಾಭಿಷೇಕ, ಮಧ್ಯಾಹ್ನ ಗಂಟೆ 12.00ರಿಂದ ತುಲಾಭಾರ ಸೇವೆ, ಮಹಾಪೂಜೆ, ಪಲ್ಲಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆಯಲಿದೆ.
ಬೆಳಗ್ಗೆ ಗಂಟೆ 08.00 ರಿಂದ ಸರ್ವಶಕ್ತಿ ಮಹಿಳಾ ಭಜನಾ ತಂಡ ಪಡುಮಲೆ ಮತ್ತು ವರಮಹಾಲಕ್ಷ್ಮೀ ಮಹಿಳಾ ಭಜನಾ ತಂಡ ಪಡುಮಲೆ ಇವರಿಂದ ಭಜನಾ ಸಂಕೀರ್ತನಾ ಸೇವೆ, ಬೆಳಗ್ಗೆ ಗಂಟೆ 10.00ರಿಂದ ತುಳು ಅಪ್ಪೆಕೂಟ ಪುತ್ತೂರು ಇವರಿಂದ ‘ತುಳುನಾಡ ಬಲಿಯೇಂದ್ರ’ ತುಳು ತಾಳಮದ್ದಲೆ, ಸಂಜೆ ಗಂಟೆ 06.00ರಿಂದ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ನಡೆಯಲಿದೆ.
ರಾತ್ರಿ ಗಂಟೆ 07.00ರಿಂದ ಶ್ರೀ ದೇವರ ಉತ್ಸವ ಬಲಿ, ಶ್ರೀ ಭೂತಬಲಿ, ನೃತ್ಯಬಲಿ, ಕಟ್ಟೆಪೂಜೆ ನಡೆಯಲಿದ್ದು, ತದನಂತರ ಸುಡುಮದ್ದು ಪ್ರದರ್ಶನ, ಅನ್ನಸಂತರ್ಪಣೆ ಜರುಗಲಿದೆ.
ದಿನಾಂಕ 14.01.2025ನೇ ಮಂಗಳವಾರ ಬೆಳಗ್ಗೆ ಗಂಟೆ 09.00ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ವಿಷ್ಣುಸಹಸ್ರನಾಮ ಪಠಣ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಪ್ರಸಾದ ನಡೆಯಲಿದೆ.
ರಾತ್ರಿ ಗಂಟೆ 08.00ರಿಂದ ಶ್ರೀ ದೇವರಿಗೆ ರಂಗಪೂಜೆ, ಅನ್ನಪ್ರಸಾದ ನಡೆಯಲಿದೆ. ತದನಂತರ ಸ್ಪರ್ಶ ಕಲಾ ತಂಡ ಸುರತ್ಕಲ್ ಇವರಿಂದ ‘ನಿರೆಲ್’ ತುಳು ಹಾಸ್ಯಮಯ ನಾಟಕ ಪ್ರದರ್ಶನವಿದೆ.
ದಿನಾಂಕ 14.01.2025ನೇ ಮಂಗಳವಾರ ರಾತ್ರಿ ಭಂಡಾರ ತೆಗೆದು, ಧ್ವಜಾರೋಹಣ ಬೀರತಂಬಿಲದೊಂದಿಗೆ ಶ್ರೀ ಪೂಮಾಣಿ ಕಿನ್ನಿಮಾಣಿ, ರಾಜನ್ ದೈವಸ್ಥಾನ ಪಡುಮಲೆಯಲ್ಲಿ ದೈವಗಳ ನೇಮೋತ್ಸವ ಜರುಗಲಿದೆ.
ದಿನಾಂಕ 15.01.2025ನೇ ಬುಧವಾರ ಪೂರ್ವಾಹ್ನ ಗಂಟೆ 06.00ರಿಂದ ದೈವಸ್ಥಾನದಲ್ಲಿ 48 ಕಾಯಿ ಗಣಪತಿ ಹೋಮ, ಆನೆ ಚಪ್ಪರ ಏರಿಸುವುದು, ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 08.00ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದೆ.
ದಿನಾಂಕ 16.01.2025ನೇ ಗುರುವಾರ ಪೂರ್ವಾಹ್ನ ಗಂಟೆ 11.00ರಿಂದ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 08.00ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದ್ದು, ರಾತ್ರಿ ಗಂಟೆ 07.00ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರುಗಲಿದೆ.
ದಿನಾಂಕ 17.01.2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 11.00ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 08.00ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಲಿದ್ದು, ತದನಂತರ ಶ್ರೀ ಪೂಮಾಣಿ-ಕಿನ್ನಿಮಾಣಿ ಸಾಂಸ್ಕೃತಿಕ ವೇದಿಕೆ ಪಡುಮಲೆ ಅರ್ಪಿಸುವ, ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ‘ಶಾಂಭವಿ’ ಕುತೂಹಲಭರಿತ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 18.01.2025ನೇ ಶನಿವಾರ ಪೂರ್ವಾಹ್ನ ಗಂಟೆ 07.00ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು ಮಲರಾಯ ದೈವದ ನೇಮ, ಬೆಳಿಗ್ಗೆ ಗಂಟೆ 11.00ರಿಂದ ರಾಜನ್ ದೈವ ಪಿಲಿಭೂತ (ವ್ಯಾಘ್ರಚಾಮುಂಡಿ) ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 05.00ರಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರಾಂಡಿ ದೈವದ ಭಂಡಾರ ಬರುವುದು. ರಾತ್ರಿ 07.00 ಗಂಟೆಯಿಂದ ಪಡುಮಲೆ-ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ರುದ್ರಾಂಡಿ ದೈವದ ನೇಮ, ಕಟ್ಟೆಪೂಜೆ, ಧ್ವಜಾವರೋಹಣ, ನವಕಾಭಿಷೇಕ, ಮಂತ್ರಾಕ್ಷತೆ ಬಳಿಕ ಗುಳಿಗ ದೈವದ ನೇಮ ನಡೆಯಲಿದೆ. ರಾತ್ರಿ 08.00ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ದಿನಾಂಕ 19.01.2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.00ಕ್ಕೆ ಪಡುಮಲೆ ದೈವಸ್ಥಾನದ ಪಿಲಿಮಾಡದಲ್ಲಿ ಪಿಲಿಭೂತ ನೇಮ, ದಿನಾಂಕ 21.01.2025ನೇ ಮಂಗಳವಾರ ಪೇರಾಲು ದೈವಸಾನದಲ್ಲಿ ಪಿಲಿಭೂತ ನೇಮ ನಡೆಯಲಿದೆ.