ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಐವತ್ತನೇಯ ದಿನದ ಪ್ರದಕ್ಷಿಣೆಗೆ ದಿನಾಂಕ: 2-8-2024 ಶುಕ್ರವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಸಾದ್ ಭಟ್, ಅನುವಂಶಿಕ ಆಡಳಿತ ಮೊಕ್ತೇಸರು ಎನ್.ಎಸ್ ಮನೋಹರ್ ಶೆಟ್ಟಿ ದುಗ್ಗಣ್ಣ ಸಾವಂತರು ಮುಲ್ಕಿ ಅರಮನೆ, ಗೀತಾಂಜಲಿ ಎಮ್.ಸುವರ್ಣ, ವೀಣಾ ಎಸ್ .ಶೆಟ್ಟಿ , ಸತೀಶ್ ದೇವಾಡಿಗ, ಶಶಾಂಕ್ , ಪ್ರದೀಪ್ ಮತ್ತು ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.