Saturday, January 18, 2025
Homeರಾಜ್ಯಮೊಬೈಲ್‌ಗಾಗಿ ತಮ್ಮನೊಂದಿಗೆ ಜಗಳ: ಯುವತಿ ಆತ್ಮಹತ್ಯೆ..!

ಮೊಬೈಲ್‌ಗಾಗಿ ತಮ್ಮನೊಂದಿಗೆ ಜಗಳ: ಯುವತಿ ಆತ್ಮಹತ್ಯೆ..!


ಕೊಡಗು: ಮೊಬೈಲ್ ವ್ಯಸನ ತುಂಬಾ ಕೆಟ್ಟದ್ದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ, ಹೌದು ಯುವತಿಯೊಬ್ಬಳು ಮೊಬೈಲ್ ವಿಚಾರದಲ್ಲಿ ಸಹೋದರನೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಆದರೆ ಎರಡು ದಿನಗಳ ನಂತರ ಆ ಯುವತಿಯ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ

ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ (19) ಮೃತಪಟ್ಟ ಯುವತಿ. 10ನೇ ತರಗತಿ ಮುಗಿಸಿ ಮನೆಯಲ್ಲಿದ್ದ ಭಾವನ ಬಿಡುವಿನ ವೇಳೆಯಲ್ಲಿ ರಥಬೀದಿಯಲ್ಲಿರುವ ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ನೆರವಾಗುತ್ತಿದ್ದಳು.

ಡಿ.8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ತಮ್ಮ ಮಹಿಪಾಲ್ ನಡುವೆ ಅಂಗಡಿಯಲ್ಲಿ ಜಗಳವಾಗಿದೆ. ಈ ಸಂದರ್ಭದಲ್ಲಿ ನಾಳೆ ಬರುವುದಾಗಿ ತಿಳಿಸಿ ಭಾನುವಾರ ಅಂಗಡಿಯಿಂದ ಸಂಜೆ ಹೊರಗೆ ತೆರಳಿದ ಭಾವನ ಕಾಣೆಯಾಗಿರುವುದಾಗಿ ತಂದೆ ರಣಜಿತ್ ಸಿಂಗ್ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಸೋಮವಾರ ದೂರು ಸಲ್ಲಿಸಿದ್ದರು
ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಸಂದರ್ಭ ಅಯ್ಯಪ್ಪಸ್ವಾಮಿ ದೇವಾಲಯ ಕಡೆ ಯುವತಿ ತೆರಳಿರುವುದು ಕಂಡುಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದೊಂದಿಗೆ ನದಿಯಲ್ಲಿ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಯುವತಿ ಮೃತದೇಹ ಅಯ್ಯಪ್ಪಸ್ವಾಮಿ ದೇವಾಲಯದಿಂದ ಕೊಂಚ ಮುಂದಕ್ಕೆ ದಂಡಿನಪೇಟೆ ಭಾಗ ಕಾವೇರಿ ನದಿಯಲ್ಲಿ ದೊರತಿದೆ.

ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular