Wednesday, July 24, 2024
Homeಮೂಡುಬಿದಿರೆಕಸ ಬಿಸಾಡಿದವರಿಗೆ ದಂಡ, ಅವರಿಂದಲೇ ಸ್ವಚ್ಛತೆ

ಕಸ ಬಿಸಾಡಿದವರಿಗೆ ದಂಡ, ಅವರಿಂದಲೇ ಸ್ವಚ್ಛತೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಗ್ರಾಮ ಪೂಪಾಡಿ ಕಲ್ಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದವರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಂಡ ವಿಧಿಸಿದ್ದು, ಮಾತ್ರವಲ್ಲದೆ ಕಸ ಬಿಸಾಡಿದವರಿಂದಲೇ ಕಸವನ್ನು ಹೆಕ್ಕಿಸಿದ್ದಾರೆ.

ಪಾಲಡ್ಕ ಹಾಗೂ ಕಡಂದಲೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಕಳೆದ ವಾರ ಪಂಚಾಯಿತಿ ವತಿಯಿಂದ ಕಸವನ್ನು ಸಂಗ್ರಹಿಸಿ, ಶುಚಿಗೊಳಿಸಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಪೂಪಾಡಿಕಲ್ಲಿನ ರಸ್ತೆ ಬದಿಯಲ್ಲಿ ಮತ್ತೆ ಕಸ ಕಾಣಿಸಿಕೊಂಡಿದೆ.

ಸ್ಥಳೀಯ ಪತ್ರಕರ್ತ ಜಗದೀಶ್ ಎಂಬವರು ಕಸವನ್ನು ಪರಿಶೀಲಿಸಿದಾಗ, ಅದರಲ್ಲಿ ಆನ್ಸೆನ್ ವಸ್ತುವನ್ನು ಬುಕ್ ಮಾಡಿದ ಖಾಲಿ ಬಾಕ್ಸ್, ಮದುವೆ ಕಾಗದ ಸಿಕ್ಕಿದೆ. ಅದರಲ್ಲಿ ಸಿಕ್ಕ ಹೆಸರು, ದೂರವಾಣಿ ಸಂಖ್ಯೆ, ವಿಳಾಸವನ್ನು ಆಧರಿಸಿ ಕಸ ಬಿಸಾಡಿದವರ ವಿರುದ್ಧ ಕ್ರಮವಹಿಸಲು ಪಂಚಾಯಿತಿ ಮುಂದಾಗಿದೆ.

ದೂರವಾಣಿ ಸಂಪರ್ಕಿಸಿದಾಗ ಕಾಲ್ ರಿಸೀವ್ ಮಾಡದ ಕಾರಣ, ಪಿಡಿಒ ಕಸ ಬಿಸಾಡಿದವರ ಮನೆಗೆ ತೆರಳಿ, ಸದರಿ ಜಾಗಕ್ಕೆ ಅವರನ್ನು ಕರೆದುಕೊಂಡು ಹೋಗಿ ಕಸ ಹೆಕ್ಕಿಸಿದ್ದಾರೆ. ಎರಡು ಸಾವಿರ ರುಪಾಯಿ ದಂಡವನ್ನು ವಿಧಿಸಿದ್ದು, ಮುಂದೆ ಪಂಚಾಯಿತಿ ಕಸದ ವಾಹನಕ್ಕೆ ಕಸವನ್ನು ನೀಡುವಂತೆ ಖಡಕ್ ಸೂಚನೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿಯಾರೇ ಕಸ ಬಿಸಾಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದೆ ಪೂಪಾಡಿಕಲ್ಲು ಪ್ರದೇಶದಲ್ಲಿ ಸಿಸಿಕ್ಯಾಮೆರಾ ಅಳವಡಿಸಲಾಗುವುದು. ಪಾಲಡ್ಕ ಪಂಚಾಯಿತಿ ಗಾಂಧಿ ಪುರಸ್ಕಾರವನ್ನು ಪಡೆದಿದೆ. ಗ್ರಾಮದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಪಿಡಿಒ ರಕ್ಷಿತಾ ಡಿ. ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular