ಪುತ್ತೂರು: ಮತಗಟ್ಟೆಯೊಳಗೆ ಮೊಬೈಲ್ ಬಳಸಿದ್ದಕ್ಕೆ ಯುವಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ. ಮತಗಟ್ಟೆಯೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ, ಮತದಾನ ಮಾಡುವ ಫೋಟೊ ಮೊಬೈಲ್ ನಲ್ಲಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿ ಪುತ್ತೂರಿನಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರ್ಯಾಪು ನಿವಾಸಿ ರಂಜಿತ್ ಬಂಗೇರ ಎಂಬಾತ ತಾನು ಮತದಾನ ಮಾಡುವ ಸಮಯದಲ್ಲಿ ಇವಿಎಂನಲ್ಲಿ ಮತ ಚಲಾಯಿಸುವ ಮತ್ತು ತನ್ನ ಬೆರಳಿಗೆ ಶಾಯಿ ಹಾಕುವ ಫೋಟೊಗಳನ್ನು ತೆಗೆದು ವಾಟ್ಸಾಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದ. ಫ್ಲೈಯಿಂಗ್ ಸ್ಕ್ವಾಡ್ – 2ರ ಉಸ್ತುವಾರಿ ಅಧಿಕಾರಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.