ಮಂಗಳೂರು: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಸಫಾವಿ ಎಂಬ ಟ್ರಾಲ್ ಬೋಟ್‌ಗೆ ಬೆಂಕಿ ಹತ್ತಿದೆ. ಇನ್ನೊಂದು ಬೋಟಿನವರು ಬೆಂಕಿ ಅವಘಡಕ್ಕೀಡಾಗಿದ್ದ ದೋಣಿಯಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಹೊಸಬೆಟ್ಟಿನ ರಶೀದಾ ಅವರಿಗೆ ಸೇರಿದ ಮೀನುಗಾರಿಕಾ ದೋಣಿ ಇದಾಗಿದೆ. ಮೀನುಗಾರಿಕಾ ರಜೆ ಮುಗಿದು ಆ.1ರಿಂದ ಬುಧವಾರ ಮೀನುಗಾರಿಕೆ ಆರಂಭವಾಗಿತ್ತು. ಭಾನುವಾರ ದೋಣಿ ಮೀನುಗಾರಿಕೆಗೆ ತೆರಳಿತ್ತು.