Thursday, July 25, 2024
HomeUncategorizedಉಳ್ಳಾಲ: ಕಲ್ಲಾಪು ಗ್ಲೋಬಲ್‌ ಮಾರುಕಟ್ಟೆಯಲ್ಲಿ ಬೆಂಕಿ; ಕೋಟ್ಯಂತರ ರೂ. ನಷ್ಟ

ಉಳ್ಳಾಲ: ಕಲ್ಲಾಪು ಗ್ಲೋಬಲ್‌ ಮಾರುಕಟ್ಟೆಯಲ್ಲಿ ಬೆಂಕಿ; ಕೋಟ್ಯಂತರ ರೂ. ನಷ್ಟ

ಉಳ್ಳಾಲ: ಇಲ್ಲಿನ ಕಲ್ಲಾಪು ಬಳಿಯ ಗ್ಲೋಬಲ್‌ ಮಾರುಕಟ್ಟೆಯಲ್ಲಿ (ಕೃಷಿ ಉತ್ಪನ್ನಗಳ ಖಾಸಗಿ ಮಾರುಕಟ್ಟೆ) ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮಾರುಕಟ್ಟೆಯ 5 ದೊಡ್ಡ ಮತ್ತು 20 ಸಣ್ಣ ಮಳಿಗೆಗಳ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
ಇಲ್ಲಿ ನವೀದ್‌ ಎಂಬವರ ಮಾಲಕತ್ವದ ಎಸ್.ಎನ್.‌ ಫ್ರೂಟ್ಸ್‌ ಮಳಿಗೆಯೊಂದರಲ್ಲೇ ಸುಮಾರು 1 ಕೋಟಿ ರೂ. ಮೌಲ್ಯದ ನಷ್ಟ ಉಂಟಾಗಿದೆ. ಸುಹೈಲ್‌ ಎಂಬವರಿಗೆ ಸೇರಿದ ಕೆಎಫ್‌ಕೆ, ಲತೀಫ್‌ ಎಂಬವರ ಕೆ.ಕೆ. ಫ್ರೂಟ್ಸ್‌, ಇಂಡಿಯನ್‌, ಸಲಾಂ ಅವರ ಬಿ.ಎಸ್.‌ಆರ್.‌, ಜುಲ್ಫೀಕರ್‌ ಅವರ ಪಿ.ಕೆ.ಎಸ್.‌, ನಾಸೀರ್‌ ಎಂಬವರ ಕೆ.ಜಿ.ಎನ್.‌ ಫ್ರೂಟ್ಸ್‌ ಮಳಿಗೆಗಳು ಸಂಪೂರ್ಣ ಸುಟ್ಟು ಹೋಗಿವೆ. ಕೋಟ್ಯಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಎಸ್.ಎನ್.‌ ಫ್ರೂಟ್ಸ್‌ ಮಾಲೀಕರು ಭಾನುವಾರ ಸಂಜೆಯಷ್ಟೇ 40 ಲಕ್ಷ ರೂ. ಬೆಲೆಯ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಳಲ್ಲಿ ಫ್ರೀಝರ್‌ಗಳಿದ್ದೂ, ಅವುಗಳು ಸುಟ್ಟು ಹೋಗಿವೆ. ಬೀಗ ಹಾಕಿದ್ದ ಮಳಿಗೆಗಳ ಒಳಗಿಂದ ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಎಲ್ಲಾ ಮಳಿಗೆಗಳಿಗೆ ಬೆಂಕಿ ವ್ಯಾಪಿಸಿದೆ. ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

RELATED ARTICLES
- Advertisment -
Google search engine

Most Popular