ಉಡುಪಿ: ಪೆಟ್ರೋಲ್ ಪಂಪ್ ಬಳಿಯೇ ಪೆಟ್ರೋಲ್ ಸೋರಿಕೆಯಾಗಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಉಡುಪಿಯ ಚಿಟ್ಪಾಡಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಪೆಟ್ರೋಲ್ ಪಂಪ್‌ನಿಂದ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿದ ವ್ಯಕ್ತಿ ಬಳಿಕ ಪೆಟ್ರೋಲ್ ತುಂಬಿದ ಬಾಟಲಿಯನ್ನು ಸ್ಕೂಟರ್ ಡಿಕ್ಕಿಯ ಒಳಗೆ ಇರಿಸಿದ್ದರು. ಬಾಟಲಿಯ ಪೆಟ್ರೋಲ್ ಲೀಕ್ ಆಗಿ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಪೆಟ್ರೋಲ್ ಪಂಪ್ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಿಂದ ಕೆಲವೇ ಅಂತರದಲ್ಲಿ ಹಲವು ಬಸ್ಸು, ಇತರ ವಾಹನಗಳನ್ನು ನಿಲ್ಲಿಸಲಾಗಿತ್ತು. ಪಂಪ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.