Friday, March 21, 2025
Homeಮಂಗಳೂರುಬಂದಾರು ಗ್ರಾಮದಲ್ಲಿ ಬೆಂಕಿ ಅವಘಡ: ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ತಕ್ಷಣ ಕ್ರಮ

ಬಂದಾರು ಗ್ರಾಮದಲ್ಲಿ ಬೆಂಕಿ ಅವಘಡ: ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ತಕ್ಷಣ ಕ್ರಮ

ಬಂದಾರು :ಫೆ 13 ಬಂದಾರು ಗ್ರಾಮದ ಕುರಾಯ ದೇವಸ್ಥಾನ ಬಳಿ ಇರುವ ಜಲ ಜೀವನ್ ನೀರಿನ ಟ್ಯಾಂಕ್ ಪಕ್ಕದ ಗೇರು ತೋಟದಲ್ಲಿ ಇಂದು ಮದ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಅಪಾರ ಪ್ರಮಾಣದ ಗೇರು ತೋಟಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ವಿಷಯ ತಿಳಿದ ತಕ್ಷಣ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಹಾಗೂ ಸ್ಥಳೀಯ ನಿವಾಸಿಗಳಾದ ಶ್ರೀಧರ ಗೌಡ ಕುಂಬುಡಂಗೆ , ಶ್ರೀತಿಕ್ ಗೌಡ ಕುಂಬುಡಂಗೆ, ರಾಘವ ಗೌಡ ಕುರಾಯ, ಕಾವ್ಯ ಕುರಾಯ , ಮಾಲತಿ ಕುರಾಯ, ಕುಸುಮ ಕುರಾಯ, ಕೃಷ್ಣಪ್ಪ ಖಂಡಿಗ, ಸಚಿನ್ ಶೆಟ್ಟಿ ಬಾಂಗೇರು, ಗಿರೀಶ್ ಗೌಡ ಬಿ ಕೆ.ಕುಂಬುಡಂಗೆ, ಪ್ರಸಾದ್ ಗೌಡ ಅಂಡಿಲ,ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಭಾರಿ ದೊಡ್ಡ ಅನಾಹುತವನ್ನು ತಪ್ಪಿಸಲಾಗಿರುವ ಬಗ್ಗೆ ವರದಿಯಾಗಿದೆ.

RELATED ARTICLES
- Advertisment -
Google search engine

Most Popular