Wednesday, July 24, 2024
Homeಪುತ್ತೂರುಪುತ್ತೂರು | ಮನೆಗೆ ಬೆಂಕಿ; ಇಡೀ ಮನೆ ಸುಟ್ಟು ಕರಕಲಾದರೂ ಕಲ್ಲುರ್ಟಿ ದೈವದ ಮಣೆಮಂಚಾವಿಗೆ ಯಾವುದೇ...

ಪುತ್ತೂರು | ಮನೆಗೆ ಬೆಂಕಿ; ಇಡೀ ಮನೆ ಸುಟ್ಟು ಕರಕಲಾದರೂ ಕಲ್ಲುರ್ಟಿ ದೈವದ ಮಣೆಮಂಚಾವಿಗೆ ಯಾವುದೇ ಹಾನಿಯಾಗಿಲ್ಲ!

ತುಳುನಾಡಿನಲ್ಲಿ ಮತ್ತೆ ಕಾರಣಿಕ ಮೆರೆದ ಅಪ್ಪೆ ಕಲ್ಲುರ್ಟಿ!

ಪುತ್ತೂರು: ತುಳುನಾಡಿನಲ್ಲಿ ಜನರು ದೇವರಿಗಿಂತ ದೈವಕ್ಕೆ ಹೆಚ್ಚು ಭಕ್ತಿ ತೋರಿಸುತ್ತಾರೆ. ದೈವಗಳು ನಮ್ಮ ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ತುಳುವರದ್ದು. ಅದಕ್ಕೆ ತಕ್ಕಂತೆ ದೈವಗಳೂ ಸಾಕಷ್ಟು ಬಾರಿ ತಮ್ಮ ಕಾರಣಿಕ ಶಕ್ತಿ ಪ್ರದರ್ಶಿಸಿ ತಮ್ಮ ಇರುವಿಕೆಯನ್ನು ಪ್ರದರ್ಶಿಸಿಕೊಂಡು ಬಂದಿವೆ. ಅದರಂತೆ ಈಗ ಪುತ್ತೂರಿನ ಮನೆಯೊಂದರಲ್ಲಿ ರೆಫ್ರಿಜರೇಟರ್‌ ಸ್ಫೋಟಗೊಂಡು ಮನೆ ಹೊತ್ತಿ ಉರಿದಿದೆ. ಆದರೆ ಮನೆಯೊಳಗಿದ್ದ ಕಲ್ಲುರ್ಟಿ ದೈವದ ಪೀಠಕ್ಕೆ ಕಿಂಚಿತ್ತೂ ಹಾನಿಗೊಂಡಿಲ್ಲ. ಈ ಕುರಿತ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ಪುತ್ತೂರಿನ ಜಿಡೆಕಲ್ಲು ಕಾಲೇಜು ಬಳಿಯ ಮನೆಯೊಂದರಲ್ಲಿ ರೆಫ್ರಿಜರೇಟರ್‌ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ ತಾವು ನಂಬಿದ ಕಲ್ಲುರ್ಟಿ ದೈವದ ಪೀಠಕ್ಕೆ ಯಾವುದೇ ಹಾನಿಯಾಗಿಲ್ಲ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


ಮನೆಗೆ ಬೆಂಕಿ ತಗುಲಿದ ತಕ್ಷಣ ಕಾಲೇಜಿನ ವಿದ್ಯಾರ್ಥಿಗಳಾದ ಎಡ್ವರ್ಡ್‌, ವಿಖ್ಯಾತ್‌, ಪ್ರೀತೇಶ್‌ ಸೇರಿ ಸ್ಥಳೀಯ ಅಶೋಕ್‌ ಅವರ ಸಹಾಯದಿಂದ ನೀರು ಹಾಕಿ ಬೆಂಕಿ ನಂದಿಸಿದ್ದರು. ಆ ಬಳಿಕ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.

RELATED ARTICLES
- Advertisment -
Google search engine

Most Popular