ಮಂಗಳವಾರದಂದು ಗ್ರಾಮ ಪಂಚಾಯತ್ ವಠಾರದಲ್ಲಿ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಾರಿಗೆ ಸಂಬಂಧಿತ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇದ್ದಾಗ ಗ್ರಾಮ ಸಭೆಯನ್ನು ಮುಂದೂಡುವಂತೆ ಆಗ್ರಹಿಸಲಾಯಿತು.
ಗ್ರಾಮದ ತೀವ್ರ ನೆನೆಗುದಿಗೆ ಬಿದ್ದಿರುವ ಹಿಂದೂ ರುದ್ರ ಭೂಮಿ ಹಾಗೂ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗಾಗಲೇ ಲಭ್ಯವಿರುವ ಸ್ಥಳ ನಿಗದಿಪಡಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು ಸಾರ್ವಜನಿಕ ಹಿತ ದೃಷ್ಟಿಯ ಕಾಮಗಾರಿಗಳು ಜರಗಿ ವರ್ಷವಾದರೂ ಗುತ್ತಿಗೆದಾರರಿಗೆ ಬಿಲ್ಲು ಬಾವತಿಸಲುಇರುವ ತಾಂತ್ರಿಕ ಅಡಚಣೆಯನ್ನು ನಿವಾರಿಸಿ ಕಾಮಗಾರಿಯ ಬಿಲ್ ಪಾವತಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು ನೊಂದವರ ಶಾಲೆಗೆ ನೂತನ ಗುಡ್ಡಗುಸಿತ ಪ್ರದೇಶಕ್ಕೆ ಶಾಶ್ವತ ತಡೆಗೋಡೆ ಬಗ್ಗೆ ಜಿಲ್ಲಾಡಳಿತದಿಂದ ಅನುದಾನಕ್ಕೆ ಒತ್ತಾಯಿಸಲಾಯಿತು.
ಮಂಗಳೂರು ನಗರಕ್ಕೆ ನೀರು ಪೂರೈಸಲು ತುಂಬೆ ಡ್ಯಾಮ್ ಸಂತ್ರಸ್ತ ರೈತರ ಜಮೀನು ಮುಳುಗಡೆಯಾದರೂ ಕೆಲವೊಂದು ರೈತರಿಗೆ ಭೂ ಪರಿಹಾರ ನೀಡಲು ನಗರ ಪಾಲಿಕೆ ಸತಾಯಿಸುತ್ತಿದ್ದು ಜಿಲ್ಲಾಡಳಿತ ಕೂಡಲೇ ರೈತರಿಗೆ ನ್ಯಾಯಾಚಿತ್ರ ಒದಗಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾದಾಗ ನೇತ್ರಾವತಿ ನದಿಯ ಇಕ್ಕಳಗಳ ರೈತರ ಹಂಪಸಟ್ಟುಗಳ ವಿದ್ಯುತ್ ಶಕ್ತಿ ಸಂಪರ್ಕವನ್ನು ಏಕಾಏಕಿ ಪೂರ್ವ ಸೂಚನೆ ನೀಡದೆ ಸ್ಥಗಿತಗೊಳಿಸಿರುವ ಹಾಗೂ ಸರಕಾರದ ವೆಚ್ಚದಿಂದಲೇ ನಿರ್ಮಾಣಗೊಂಡ ಏತ ನೀರಾವರಿ ಪಂಪಿನ ವಿದ್ಯುತ್ ಶಕ್ತಿಯನ್ನು ಸ್ಥಗಿತಗೊಳಿಸಿರುವ ಜಿಲ್ಲಾ ಆಡಳಿತದ ಆದೇಶ ರೈತ ವಿರೋಧಿ ಧೋರಣೆಯನ್ನು ಹೊಂದಿದ್ದು ಕೃಷಿಯನ್ನೇ ನಂಬಿ ಜೀವಿಸುವ ರೈತರ ಹಿತಾಸಕ್ತಿಯನ್ನು ಕಾಪಾಡಲು ರೈತರ ವಿಶ್ವಾಸವನ್ನು ಪಡೆದು ಈ ಹಿಂದಿನಂತೆ ಎರಡು ದಿನಕ್ಕೊಂದಾವರ್ತಿ ರೈತರು ನದಿ ನೀರು ಬಳಸಲು ಅವಕಾಶ ನೀಡುವಂತೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ನೀಡಿದ ಮನವಿಯಂತೆ ಗ್ರಾಮ ಸಭೆಯಲ್ಲಿ ಜಿಲ್ಲಾ ಆಡಳಿತಕ್ಕೆ ತಿಳಿಸುವಂತೆ ನಿರ್ಣಯಿಸಲಾಯಿತು.
ಗ್ರಾಮ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಯೂಸುಫ್.ಕ ರಂದಾಡಿ. ಶರೀಫ್ ನಂದಾವರ. ಸಲೀಂ. ಇಸ್ಮಾಯಿಲ್. ಸುರೇಶ್ ಗಟ್ಟಿ. ಇದಿನ ಬ್ಬ. ಫಾರೂಕ್. ಮಜೀದ ಜುಬೇರ್.ಗಂಗಾಧರ ನಾಯಕ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ವಂದಿಸಿದರು. ಪಂಚಾಯಿತಿ ಕಾರ್ಯದರ್ಶಿ ವರದಿ ಮಂಡಿಸಿದರು