Monday, July 15, 2024
Homeರಾಜ್ಯನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು, ಪ್ರಾಣದೊಂದಿಗೆ ಚೆಲ್ಲಾಟ ಆಡಿದ ಯುವಕ ಕಪಾಳಕ್ಕೆ ಬಾರಿಸಿದ ಮೀನುಗಾರ

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು, ಪ್ರಾಣದೊಂದಿಗೆ ಚೆಲ್ಲಾಟ ಆಡಿದ ಯುವಕ ಕಪಾಳಕ್ಕೆ ಬಾರಿಸಿದ ಮೀನುಗಾರ

ಜೀವನದಲ್ಲಿ ಏನಾದ್ರೂ ಸಮಸ್ಯೆ ಬಂದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದು ಫ್ಯಾಷನ್‌ ಆಗಿಬಿಟ್ಟಿದೆ. ಅದರಲ್ಲೂ ಈ ಅಮರ ಪ್ರೇಮಿಗಳು ತಮ್ಮ ಪ್ರೀತಿಗೆ ಮನೆಯವರು ಒಪ್ಪದಿದ್ದರೆ, ಇದಕ್ಕೆಲ್ಲಾ ಸಾವು ಒಂದೇ ಪರಿಹಾರವೆಂದು ಇಬ್ಬರೂ ಜೊತೆಗೆ ನದಿಗೆ ಹಾರಿಯೋ ಅಥವಾ ವಿಷ ಸೇವಿಸಿಯೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಹಲವಾರು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಸದ್ಯ ಅಂತಹದೇ ಘಟನೆಯೊಂದು ನಡೆದಿದ್ದು, ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಪ್ರೇಮಿಗಳಿಬ್ಬರು ನದಿಗೆ ಹಾರಿ ಅತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮೀನುಗಾರರೊಬ್ಬರು ಆ ಇಬ್ಬರ ಪ್ರಾಣವನ್ನು ರಕ್ಷಿಸಿ ಬಳಿಕ ಸಾಯುವ ನಿರ್ಧಾರ ಮಾಡಿದ್ದಕ್ಕೆ ಪ್ರೇಮಿಯ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದಿದ್ದು, ಇಲ್ಲಿನ ಗೋಲಘಾಟ್‌ ಬಳಿಯ ಗೋಮತಿ ನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ನದಿಗೆ ಹಾರುವುದನ್ನು ಕಂಡ ಮೀನುಗಾರರು ತಮ್ಮ ಜೀವದ ಹಂಗನ್ನು ತೊರೆದು ಆ ಇಬ್ಬರ ಪ್ರಾಣವನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಯಂತಹ ಹುಚ್ಚು ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮೀನುಗಾರರೊಬ್ಬರು  ಕೋಪದಲ್ಲಿ ಪ್ರೇಮಿಯ ಕಪಾಳಕ್ಕೆ ಸರಿಯಾಗಿ ಬಾರಿಸಿದ್ದಾರೆ.

ಈ ವಿಡಿಯೋವನ್ನು ಪ್ರಿಯಾ ಸಿಂಗ್‌ (@priyarjaputlive) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ನದಿಗೆ ಹಾರಿದ ಪ್ರೇಮಿಗಳನ್ನು ರಕ್ಷಿಸಿ ನದಿ ದಡದ ಬಳಿ ಕರೆತಂದು ಬಳಿಕ ಪ್ರಾಣದೊಂದಿಗೆ ಆಟವಾಡುವುದು ನಿಮಗೆಲ್ಲಾ ತಮಾಷೆಯಾಗಿ ಬಿಟ್ಟಿದೆಯಾ ಎನ್ನುತ್ತಾ ಮೀನುಗಾರರರೊಬ್ಬರು ಕೋಪದಲ್ಲಿ ಪ್ರೇಮಿಯ ಕಪಾಳಕ್ಕೆ  ಬಾರಿಸುವ ದೃಶ್ಯವನ್ನು ಕಾಣಬಹುದು.

ಜೂನ್‌ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 97 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆತನಿಗೆ ಇನ್ನೂ ಬಾರಿಸಬೇಕಿತ್ತು ಎನ್ನುತ್ತಾ ಮೀನುಗಾರರ ಕೆಲಸಕ್ಕೆ ನೆಟ್ಟಿಗರು ಭೇಷ್‌ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular