ಬೆಂಗಳೂರು: SAP Labs India ತನ್ನ “SAP ರನ್ 2024”ರ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮವು 5000ಕ್ಕೂ ಹೆಚ್ಚು Running ಸಮುದಾಯದ ಜನರನ್ನು ಫಿಟ್ನೆಸ್, ಪರಸ್ಪರ ಸಹಯೋಗ ಹಾಗೂ ಸಮಾನ ಉದ್ದೇಶಗಳಿಗಾಗಿ ಒಟ್ಟುಗೂಡಿಸಿತು.
ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (KTPO) ಆವರಣದಿಂದ ಪ್ರಾರಂಭವಾದ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಎಲ್ಲೆಡೆಯಿಂದ ಬಂದಿದ್ದ ಓಟಗಾರರು 3 ಕಿ.ಮಿ, 5 ಕಿ.ಮಿ ಹಾಗೂ 10 ಕಿ.ಮಿ ಹೀಗೆ ಹಲವು ವಿಭಾಗಗಳಲ್ಲಿ ಒಗ್ಗಟ್ಟಿನಿಂದ ಭಾಗವಹಿಸಿದರು.
ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾದ ಪ್ರಖ್ಯಾತ ಕ್ರಿಕೆಟ್ ಆಟಗಾರರಾದ ಜಾಂಟಿ ರೋಡ್ಸ್ ಅವರ ಉಪಸ್ಥಿತಿಯಲ್ಲಿ ‘SAP ರನ್’ ಪ್ರಾರಂಭವಾಯಿತು.
ಇದರೊಂದಿಗೆ ಆರ್ ಜೆ ಪೃಥ್ವಿ ಅವರ ಅತ್ಯುತ್ತಮ ನಿರೂಪಣೆಯು ನೆರೆದಿದ್ದ ಎಲ್ಲಾ ಸ್ಪರ್ಧಿಗಳಲ್ಲಿ ಸ್ಪೂರ್ತಿದಾಯಕ ಹಾಗೂ ಉಲ್ಲಾಸದ ವಾತಾವರಣವನ್ನು ಕಾರ್ಯಕ್ರಮದುದ್ದಕ್ಕೂ ಕೊಂಡೊಯ್ದಿತ್ತು
SAP Labs Indiaದ ಹಾಗೂ NASSCOM ನ ಅಧ್ಯಕ್ಷರೂ ಆದ ಶ್ರೀಮತಿ ಸಿಂಧು ಗಂಗಾಧರನ್ ಅವರು, “ನಮ್ಮ ಪ್ರಪ್ರಥಮ SAP ರನ್ ಆಯೋಜನೆಯು ನಮಗೆ SAP Labs Indiaದಲ್ಲಿ ಅತ್ಯದ್ಭುತ ಅನುಭವವನ್ನು ತಂದುಕೊಟ್ಟಿದ್ದು 5000ಕ್ಕೂ ಹೆಚ್ಚು ಸ್ಪರ್ಧಾಳುಗಳು ಒಗ್ಗಟ್ಟಾಗಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿರುವುದನ್ನು ನೋಡಲು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಈ ಕಾರ್ಯಕ್ರಮವು, ನಮಗಿರುವ ಸಮುದಾಯದ ಬದ್ಧತೆ ಹಾಗೂ ಯೋಗಕ್ಷೇಮದ ಕಾಳಜಿಯನ್ನು ಒತ್ತಿ ಹೇಳುತ್ತಿದೆ. ಅಗಾಧವಾದ ಸಂಖ್ಯೆಯಲ್ಲಿ ನೆರೆದಿದ್ದ ಸ್ಪರ್ಧಿಗಳನ್ನು ಕಂಡು ರೋಮಾಂಚನವಾಗಿದೆ. ಸಮಾನ ಹಾಗೂ ಸ್ವಸ್ಥ ಮನಸ್ಥಿತಿಯ ಎಲ್ಲಾ ವಯಸ್ಸಿನ ಜನರನ್ನು ಒಗ್ಗೂಡಿಸಿ “SAP ರನ್” ಅನ್ನು ಪ್ರತೀ ವರ್ಷ ಆಚರಿಸುವ ಸಂಪ್ರದಾಯವನ್ನಾಗಿ ಮುಂದುವರೆಸುವುದು ನಮ್ಮ ಗುರಿಯಾಗಿದೆ. ಇಂದಿನ ಈ ಕಾರ್ಯಕ್ರಮದ ಯಶಸ್ಸು ಮೈನವಿರೇಳಿಸುವ ಬೆಂಗಳೂರಿನ ಹುಮ್ಮಸ್ಸು ಹಾಗೂ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ಅಡಿಪಾಯದೊಂದಿಗೆ ಮುಂದಿನ ವರುಷಗಳಲ್ಲಿ ಬೆಳವಣಿಗೆಯನ್ನು ಕಾಣಲು ಎದುರು ನೋಡುತ್ತಿದ್ದೇವೆ” ಎಂದು ಹಂಚಿಕೊಂಡರು.
ಈ ಕಾರ್ಯಕ್ರಮವು ಬಹಳಷ್ಟು ಗೌರವಾನ್ವಿತ ಪಾಲುದಾರರನ್ನು ಒಳಗೊಂದಿದ್ದು, ಆರೋಗ್ಯ ಪಾಲುದಾರರಾಗಿ ಮಣಿಪಾಲ್ ಆಸ್ಪತ್ರೆ, ಸುಸ್ಥಿರತೆಯ ಮೊಬಿಲಿಟಿ ಪಾಲುದಾರರಾಗಿ ಲಿಥಿಯಂ , ಕ್ರೀಡಾ ಪಾಲುದಾರರಾಗಿ ಡಿಕಾಥ್ಲಾನ್, ರೇಡಿಯೊ ಪಾಲುದಾರರಾಗಿ ರೆಡ್ ಎಫ್.ಎಂ. ಮತ್ತು ಫಿಸಿಯೋಥೆರಪಿ ಪಾರ್ಟ್ನರ್ ಆಗಿ ಎಲಿವೇಟ್ ಪರ್ಫಾರ್ಮೆನ್ಸ್ , ಇವರೆಲ್ಲರ ಸಹಯೋಗವು ಆರೋಗ್ಯ, ಸುಸ್ಥಿರತೆ ಮತ್ತು ಸಮುದಾಯದ ಸ್ವಾಸ್ಥ್ಯಕ್ಕೆ ಒತ್ತು ನೀಡುವ ಸಮಗ್ರ ಅನುಭವ ಸೃಷ್ಟಿಸುವಲ್ಲಿ ಬಹಳ ಮುಖ್ಯವಾಗಿದೆ.