Tuesday, December 3, 2024
Homeಕಾಸರಗೋಡುಲಾರಿ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತ್ಯು

ಲಾರಿ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತ್ಯು

ಕಾಸರಗೋಡು: ತ್ರಿಶೂರಿನ ನಾಟಿಗ ಜಿ.ಕೆ. ಥಿಯೇಟರ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಮೇತುವೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿದ್ದೆ ಮಾಡಿದ್ದವರ ಮೇಲೆ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಕಾಳಿಯಪ್ಪನ್ (50), ನಾಗಮ್ಮ (39), ಬಂಗಾಳಿ (20), ಜೀವನ್(4) ಮತ್ತು ಇನ್ನೊಂದು ಮಗು ಎಂದು ತಿಳಿದು ಬಂದಿದೆ. ಮೃತರು ಗೋವಿಂದಪುರಂ ಚೆಮ್ಮಣಂತೋಡ್ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular