Wednesday, September 11, 2024
Homeಅಂತಾರಾಷ್ಟ್ರೀಯಸರೋವರದಲ್ಲಿ ಪತನಗೊಂಡ ವಿಮಾನ | ಪೈಲಟ್‌ಗಳು ಕಣ್ಮರೆ; ಬದುಕುಳಿದ ಮಹಿಳೆ

ಸರೋವರದಲ್ಲಿ ಪತನಗೊಂಡ ವಿಮಾನ | ಪೈಲಟ್‌ಗಳು ಕಣ್ಮರೆ; ಬದುಕುಳಿದ ಮಹಿಳೆ

ವಿಮಾನವೊಂದು ಸರೋವರದಲ್ಲಿ ಪತನಗೊಂಡು ಇಬ್ಬರು ಪೈಲಟ್‌ಗಳು ಕಣ್ಮರೆಯಾದ ಘಟನೆ ನಡೆದಿದೆ. ಒಬ್ಬ ಮಹಿಳೆ ಬದುಕುಳಿದಿದ್ದು, ಆಕೆಯನ್ನು ಮೀನುಗಾರರು ರಕ್ಷಿಸಿದ್ದಾರೆ. ಮಾಲಾವಿಯಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನ ನಿಯಂತ್ರಣ ತಪ್ಪಿ ಮಾಲಾವಿ ಸರೋವರಕ್ಕೆ ಬಿದ್ದಿದೆ. ಡಚ್‌ ಮಹಿಳಾ ಪ್ರಯಾಣಿಕರು ಬದುಕುಳಿದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರು ಜನರನ್ನು ಹೊತ್ತೊಯ್ಯಬಲ್ಲ ಸೆಸ್ನಾ ಸಿ10 ವಿಮಾನದಲ್ಲಿ ಮೂರು ಮಂದಿ ಮಾತ್ರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ವಿಮಾನದ ಅವಶೇಷಗಳು ಸಿಕ್ಕಿವೆ. ಮಾಲಾವಿ ಸರೋವರ ಆಫ್ರಿಕಾದ ಮೂರನೇ ಅತಿದೊಡ್ಡ ಸರೋವರ. 580 ಕಿ.ಮೀ. ವಿಸ್ತಾರದಲ್ಲಿ ಈ ಸರೋವರ ಇದೆ. ಇದು ದೇಶದ ಅರ್ಧಕ್ಕಿಂದ ಹೆಚ್ಚು ಉದ್ದವಿದೆ.

RELATED ARTICLES
- Advertisment -
Google search engine

Most Popular