Monday, July 15, 2024
Homeರಾಜ್ಯಮಂಜು ಕವಿದ ವಾತಾವರಣದಲ್ಲಿ ಪ್ರಯಾಣಿಕರಿಗೆ ಸ್ವರ್ಗದಂತೆ ಭಾಸವಾದ ಚಾರ್ಮಾಡಿ ಘಾಟಿ!

ಮಂಜು ಕವಿದ ವಾತಾವರಣದಲ್ಲಿ ಪ್ರಯಾಣಿಕರಿಗೆ ಸ್ವರ್ಗದಂತೆ ಭಾಸವಾದ ಚಾರ್ಮಾಡಿ ಘಾಟಿ!

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಈಗ ಮಂಜು ಮುಸುಕಿದ ವಾತಾವರಣ ಆಗಾಗ ಕಂಡುಬರುತ್ತಿದೆ. ಶುಕ್ರವಾರ ದಿನವಿಡೀ ಘಾಟಿಯಲ್ಲಿ ಮಂಜು ಕವಿದಿತ್ತು. ಇದರಿಂದ ಪ್ರಯಾಣಕ್ಕೆ ಕೊಂಚ ಕಷ್ಟವಾದರೂ, ಪ್ರಯಾಣಿಕರು ದಟ್ಟ ಅರಣ್ಯ ರಸ್ತೆಯಲ್ಲಿ ಮಂಜು ಮುಸುಕಿದ ವಾತಾವರಣದ ಸೊಬಗನ್ನು ಸವಿದರು.   

ಘಾಟಿಯುದ್ದಕ್ಕೂ ಪೂರ್ತಿ ಮಂಜು ಕವಿದಿತ್ತು. ಹೀಗಾಗಿ ವಾಹನ ಚಾಲಕರು ಲೈಟ್ ಹಾಕಿಕೊಂಡೇ ಪ್ರಯಾಣಿಸಬೇಕಾಗಿತ್ತು. ಸಂಜೆ ವೇಳೆಗೆ ರಸ್ತೆಯೇ ಕಾಣದಷ್ಟು ಮಂಜು ಮುಸುಕಿತ್ತು.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಮಳೆ ಆರಂಭವಾಗಿದೆ. ತುಂತುರು ಮಳೆಯೂ ಸುರಿಯುತ್ತಿದೆ. ಈ ನಡುವೆ ಮಂಜು ಸುರಿದರೆ ಪ್ರಯಾಣಿಕರಿಗೆ ಸ್ವರ್ಗದ ಅನುಭವ. ಪ್ರಯಾಣಿಕರು ಘಾಟಿಯಲ್ಲಿ ಅಲ್ಲಲ್ಲಿ ವಾಹನ ನಿಲ್ಲಿಸಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿದರು.

RELATED ARTICLES
- Advertisment -
Google search engine

Most Popular