ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದ.ಕ ಜಿಲ್ಲಾ ತಾಲೂಕು ಘಟಕ ಮೂಡಬಿದ್ರೆ ಸಹಯೋಗದೊಂದಿಗೆ ವಾಯ್ಸ್ ಆಫ್ ಆರಾಧನ ಪ್ರತಿಭೆಗಳಿಂದ ಜಾನಪದ ಸಾಂಸ್ಕೃತಿಕ ವೈಭವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪದ್ಮಶ್ರೀ ಭಟ್ ನಿಡ್ಡೋಡಿ, ಅಧ್ಯಕ್ಷರು,ಕ.ಜಾ.ಪ ತಾಲೂಕು ಘಟಕ ಮೂಡಬಿದ್ರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಅಧ್ಯಕ್ಷರು ಕ.ಜಾ.ಪ ದಕ್ಷಿಣ ಕನ್ನಡ ಜಿಲ್ಲೆ,ಡಾ. ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು,ಕ.ಸಾ.ಪ ಬೆಂಗಳೂರು, ಸದಾನಂದ ನಾರಾವಿ, ಗೌರವ ಸಲಹೆಗಾರರು,ಕ.ಜಾ.ಪ ತಾಲೂಕು ಘಟಕ ಮೂಡಬಿದ್ರೆ, ಚಂದ್ರಹಾಸ ದೇವಾಡಿಗ, ಸೋಮಶೇಖರ್ ಮಯ್ಯ, ಅರುಣ್, ಅಭಿಷೇಕ್ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚೇತನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ,ಕಿರಣ್ ಧನ್ಯವಾದ ಅರ್ಪಿಸಿದರು.