ದಕ್ಷಿಣ ಕನ್ನಡ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಾರ್ಗದರ್ಶನದಂತೆ ತಾಲೂಕು ಘಟಕ ಮೂಡಬಿದರೆ ಇವರು ಆಯೋಜಿಸಿರುವ ಜಾನಪದ ಗಾಯನ ಸ್ಪರ್ಧೆ 2025 ಪೂರ್ಣಗೊಂಡಿದ್ದು ಸ್ಪರ್ಧಾ ವಿಜೇತರನ್ನ ಘೋಷಿಸಲಾಗಿದೆ.
ಪ್ರಾಪ್ತಿ ಶೆಟ್ಟಿ ಮೂಡಬಿದರೆ ಇವರು ಪ್ರಥಮ ಸ್ಥಾನವನ್ನುಗಳಿಸಿರುತ್ತಾರೆ, ವೃಷ್ಟಿ ಮಂಗಳೂರು ಇವರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ, ಸ್ಪೂರ್ತಿ ಭಟ್ ವೇಣೂರು ಇವರು ತೃತೀಯ ಸ್ಥಾನವನ್ನುಗಳಿಸಿರುತ್ತಾರೆ,
ಸಮಾಧಾನಕರ ಬಹುಮಾನಗಳನ್ನು ಮೇಘನಾ ವಿ ರಾವ್, ಅನುಜ ಬಾಳಿಗ, ತನ್ಮಯಿ ಸುಳ್ಯ, ಹನ್ವಿತ್ ಆಳ್ವ, ಭೋವಿ ಚೇಳಾರು, ನಿಗಮ್ ಆಚಾರ್, ಆರಾಧ್ಯ ಪುನರೂರು, ಅಭಿಮನ್ಯು ಗದಗ, ಅರ್ಚಿತ ಕಶ್ಯಪ್, ವರ್ಷ ಪಡೀಲ್, ಭೀಮಪ್ಪ ಬೇನಾಳ, ಪೂಜಾ ಪಡೀಲು ಪಡೆದುಕೊಂಡಿರುತ್ತಾರೆ ಎಂದು ಮೂಡಬಿದರೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಪದ್ಮಶ್ರೀ ಭಟ್ ತಿಳಿಸಿರುತ್ತಾರೆ.
ಬಹುಮಾನ ವಿಜೇತರಿಗೆ ಬಹುಮಾನಗಳನ್ನು ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ, ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಮೂಡಬಿದ್ರೆ ತಾಲೂಕು ಜಾನಪದ ಕಾರ್ಯಗಾರ ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅಂದು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿರುತ್ತಾರೆ.
ಬಹುಮಾನಗಳು ನಗದು ಸಹಿತ ಫಲಕಗಳನ್ನು ಒಳಗೊಂಡಿದ್ದು, ಜಾನಪದ ಕಾರ್ಯಕ್ರಮವನ್ನು ಪ್ರಸಾರ ಪಡಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿರುತ್ತಾರೆ.
ವರದಿ.ಡಾ.ಮಂದಾರ ರಾಜೇಶ್ ಭಟ್ ಪತ್ರಕರ್ತರು