ದಾವಣಗೆರೆ: ವಿಶ್ವ ಕನ್ನಡಿಗರ ಸಂಸ್ಥೆ ಆಶ್ರಯದಲ್ಲಿ ನವಂಬರ್ 29 ರಂದು ಬೀದರ್‌ನ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾದ 69ನೇ ಕನ್ನಡ ರಾಜ್ಯೊತ್ಸವ ಮತ್ತು ಕನ್ನಡಿಗರ ಉತ್ಸವ ಸಮಾರಂಭದಲ್ಲಿ ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸಿನಿಮಾಸಿರಿ ಹತ್ತು ಹಲವು ಸಂಘಟನೆಗಳ ಸಂಸ್ಥಾಪಕರು, ಸಂಘಟಕರೂ ನಿರಂತರ ನಾಲ್ಕು ದಶಕಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಧಾರ್ಮಿಕ, ಸಾಮಾಜಿಕ ಕಾಳಜಿಯ ಸಮಾಜ ಸೇವೆಗಳನ್ನು ಗುರುತಿಸಿ ಸಾಲಿಗ್ರಾಮ ಗಣೇಶ್ ಶೆಣೈಯವರನ್ನು “ಕರ್ನಾಟಕ ರಾಜ್ಯೋತ್ಸವ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಕರ್ನಾಟಕದ ಅಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಹಳ್ಳಿ
ತಿಳಿಸಿದ್ದಾರೆ.
“ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ”, “ದಾವಣಗೆರೆಯ ಯಕ್ಷಗಾನ ರಾಯಭಾರಿ” ಎಂದೇ
ಬಿರುದಾಂಕಿತರೂ ನೂರಾರು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶೆಣೈಯರಿಗೆ ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಸಿನಿಮಾಸಿರಿ ಸಂಸ್ಥೆ, ಕರ್ನಾಟಕ ಸಗಮ ಸಂಗೀತ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಛಾಯಾಗ್ರಾಹಕ ಸಂಘ, ಗೌಡ ಸಾರಸ್ವತ ಸಮಾಜ ಮುಂತಾದ ಅನೇಕ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.